Monday, November 23, 2009

praarthane


ಪ್ರಾರ್ಥನೆ..

ಮಾತೆ ನನ್ನ ಮನವು ತುಂಬ ಮೆದುವಾದುದೆ ಆದರಾಗ
ನಿನ್ನ ಮೃದುಲ ಪಾದಗಳಿಗೆ ಮೋಜವಾಗಲಿ.
ಹಾಗಿಲ್ಲದೆ ಕಠಿಣವಾಯ್ತೊ, ನಿನ್ನ ಶುಭ ವಿವಾಹದಲ್ಲಿ
ಕಲ್ಲ ಮೆಟ್ಟೊ ವಿಧಿಯಲದರ ಬಳಕೆಯಾಗಲಿ.

ಸ್ಯಾತ್ಕೋಮಲಂ ಯದಿ ಮನೋ ಮಮ ವಿಶ್ವಮಾತಃ
ತ್ವತ್ಪಾದಯೋರ್ಮೃದುಲಯೋಸ್ತವ ಪಾದುಕಾಸ್ತು |
ಸ್ಯಾತ್ಕರ್ಕಶಂ ಯದಿ ಕರಗ್ರಹಣೇ ಮುರಾರೇಃ
ಅಶ್ಮಾಧಿರೋಹಣವಿಧೌ ಭವತೂಪಯೋಗಃ ||
-ವೇದಾಂತ ದೇಶಿಕಸ್ಯ.

kaavya saarthakya..


ಕಾವ್ಯ ಸಾರ್ಥಕ್ಯ...

ರಚಿಪುದು ಕಾವ್ಯವ ಕವಿಯಾದೊಡೆ ಏಂ
ರಸಿಪುದು ಪಂಡಿತ ಪರಿವಾರ !
ತರುಣಿಯ ಲಾವಣ್ಯವನುಣುವಾತನು
ಪಿತನಲ್ಲವು ಪತಿ ಎಂಬ ತೆರ !

ಕವಿಃ ಕರೋತಿ ಕಾವ್ಯಾನಿ ಸ್ವಾದು ಜಾನಂತಿ ಪಂಡಿತಾಃ |
ತರುಣ್ಯಾ ಅಪಿ ಲಾವಣ್ಯಂ ಪತಿರ್ಜಾನಾತಿ ನೋ ಪಿತಾ ||

vyarthaalaapa


ವ್ಯರ್ಥಾಲಾಪ... -1992 

ಹೇ ಹೇ ಚಾತಕ! ಸಾವಧಾನಮನಸಿಂ ಮಿತ್ರ ಕ್ಷಣಂ ಆಲಿಸು
ಮೋಡಂಗಳ್ ಬಹಳಿರ್ಪವೇಳ್ ಗಗನದೊಳ್, ಅಂತಾಗವೇಂ ಎಲ್ಲವುಂ      |
ಮಳೆಯೊಳ್ ತೋಯಿಸಿ ಭೂಮಿಯಂ ಕೆಲವ್, ಕೆಲವೋ ಬರೀ ಘರ್ಜನೈ
ಯಾರ್ಯಾರ್ ನೋಡಿಯೊ, ಎಲ್ಲರೆಲ್ಲರಿದಿರೊಳ್ ನೀ ಬೇಡಬೇಡೈ ಸಖಾ!       ||

ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಂ
ಅಂಬೋಧಾ ಬಹವೋ ವಸನ್ತಿ ಗಗನೇ ಸರ್ವೇ„ಪಿ ನೈತಾದೃಶಾಃ |
ಕೇಚಿದ್ ವೃಷ್ಟಿಭಿರಾದ್ರ್ರಯಂತಿ ಧರಣೀಂ ಗಜರ್ಂತಿ ಕೇಚಿದ್ ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ  ||

bhyrappa function


ಎರಡು ದಿಗ್ಗಜಗಳು...
VIDWAN AREYAR SRIRAMA SHARMA & BHYRAPPA...

bhyrappa function


ಎರಡು ದಿಗ್ಗಜಗಳು...
 VIDWAN AREYAR SRIRAMA SHARMA & BHYRAPPA..

bhyrappa function


Group Photo...
1) JAYANTHI MANOHAR 2) BHYRAPPA 3) Dr. S R LEELA
4..,5..,6) MANOHAR 7) SIMHA 8) R GANESH 9.., 10) SRINIVASAN M V

bhyrappa function


after the session....
1) Dr. R GANESH 2) BHYRAPPA 3) SIMHA

bhyrappa function


before his session.....
1) SIMHA 2) BABU KRISHNA MURTHY 3) AREYAR SRIRAMA SHARMA

bhyrappa function


1) Dr. S R LEELA 2) BABU KRISHNA MURTHY 3) SIMHA S N
in a seminar on bhyrappa's novels at bangalore.

with bhyrappa..


ಭೈರಪ್ಪ ನವರೊಂದಿಗೆ ಒಂದು ಆಪ್ತ ಸಂವಾದ...

Sunday, November 22, 2009

photo-2


ಹಿತೈಷಿಣಿಯ ಹಾರೈಕೆ...  
ಶ್ರೀಮತಿ ಗೋದಾ ..


photo-1


ಬುದ್ಧನ ನಗು ಬಿಡುಗಡೆ..
೧ ಲೇಖಕ. ೨ ಪ್ರೊ.ಎಂ ಎ ಲಕ್ಷ್ಮೀತಾತಾಚಾರ್ಯ ೩ ಸುರೇಂದ್ರ ಕೌಲಗಿ ೪ ಪ್ರೊ. ಎಂ ವಿ ವರದರಾಜನ್

Saturday, November 21, 2009

900 gram tookada kallu


900 ಗ್ರಾಂ ತೂಕದ ಕಲ್ಲು..!

ಹಲವಾರು ವರ್ಷ ಕಠಿಣ ತಪಸ್ಸು ಮಾಡಿ ಅವನು ಒಂದು ವರ ಕೇಳಿದ.
‘ತನಗೆ ಎಂಥದೇ ಗಾಯವಾದರೂ ನೋವಾಗಬಾರದು’
ದೇವರು ಸುಮ್ಮನೆ ತಥಾಸ್ತು ಅನ್ನಲಿಲ್ಲ. ‘ಆಗಬಹುದು, ಆದರೆ ಅದಕ್ಕೆ ಹಲವು ನಿಬಂಧನೆಗಳಿವೆ’ ಅಂದ.
ಇವನಿಗೆ ಆತುರ. ವಿಮಾ ಕಂಪನಿಗಳ ಬಾಂಡ್‍ಗಳಂತೆ ತುಂಬಾ ಸಣ್ಣಕ್ಷರಗಳಲ್ಲಿದ್ದ ಆ ನಿಬಂಧನೆಗಳನ್ನು ಓದುವ ಗೋಜಿಗೆ ಹೋಗದೆ -ಸಾಲ ಪಡೆಯುವವನು ದರ್ದಿನಲ್ಲಿ ಖಾಲಿ ಛಾಪಾ ಕಾಗದಕ್ಕೆ ಹೆಬ್ಬೆಟ್ಟು ಒತ್ತುವ ಹಾಗೆ- ಅದಕ್ಕೆ ರುಜು ಹಾಕಿದ. ಆ ಕರಾರಿನ ಕಾಪಿಯೊಂದನ್ನು ತಾನಿಟ್ಟುಕೊಂಡು, ಒರಿಜಿನಲ್ ಅನ್ನು ಅವನಿಗೇ ಮರಳಿಸಿದ ದೇವರು ‘ತಥಾಸ್ತು’ ಎನ್ನುತ್ತಾ ಅಂತರ್ಧಾನನಾದ.
ವರವನ್ನು ಪರೀಕ್ಷಿಸುವ ಸಲುವಾಗಿ ಇವನು ಒಂದು ಬ್ಲೇಡ್‍ನಿಂದ ಮೊಣಕೈ ಗೀರಿಕೊಂಡ. ರಕ್ತ ಜಿನುಗಿತು. ಆದರೆ ನೋವಿನ ಅನುಭವವೇ ಅಗುತ್ತಿಲ್ಲ! ಹುರ್ರೇ ಎಂದು ಕಿರುಚಿಕೊಂಡ. ಜಿನುಗಿದ ರಕ್ತ ವೇಸ್ಟ್ ಆಗಬಾರದೆಂದು ಆ ರಕ್ತದಿಂದ ಒಂದು ಪತ್ರ ಬರೆದು ಪೋಸ್ಟ್ ಮಾಡಿದ. ಕೆಲವು ಕ್ಷಣಗಳ ನಂತರ ಗಾಯ ಕೂಡ ಮಾಯವಾಯಿತು. ಇನ್ನೂ ಪರೀಕ್ಷಿಸಬೇಕೆನಿಸಿತು. ಪಿಸ್ತೂಲಿನಿಂದ ಕಣತಲೆಗೆ ಗುರಿಯಿಟ್ಟು ಗುಂಡು ಹಾರಿಸಿಕೊಂಡ. ಮಿದುಳನ್ನು ಛೇದಿಸಿಕೊಂಡು ಹೋಯಿತು ಆ ಬುಲ್ಲೆಟ್. ಆದರೂ ನೋವಾಗಲಿಲ್ಲ. ಅಷ್ಟೇ ಅಲ್ಲ ಕೆಲವು ಕ್ಷಣಗಳಲ್ಲೇ ಒಂದು ಚೂರು ಕಲೆ ಸಹ ಉಳಿಯದಂತೆ ಆ ಗಾಯವೂ ಮಾಯ್ದು ಹೋಯಿತು.
ಇಷ್ಟೆಲ್ಲ ಪೂರ್ವಸಿದ್ಧತೆ ಮಾಡಿಕೊಂಡು ನೇರವಾಗಿ ಅವಳ ಬಳಿಗೆ ಬಂದ. ರಕ್ತದಲ್ಲಿ ಬರೆದ ಪತ್ರ ಅವಳಿಗೆ ತಲಪಿತ್ತೋ ಇಲ್ಲವೋ ಗೊತ್ತಿಲ್ಲ! ಅವಳ ಎದುರು ನಿಂತವನೇ ತನ್ನೆದೆಗೆ ಕೈ ಹಾಕಿ ಬಗೆದು, ರಕ್ತ ಪಂಪಿಸುತ್ತಿದ್ದ ಹೃದಯವನ್ನು ಕಿತ್ತು ಅವಳ ಕಾಲ ಬುಡದಲ್ಲಿಟ್ಟು ‘ಐ ಲವ್ ಯೂ’ ಅಂದ.
ದನದ ಮಾಂಸ ತಿನ್ನುವ ಜಾತಿಯವಳೇ ಆದರೂ, ಅವಳು ಅವನ ಈ ಚರ್ಯೆಯಿಂದ ಗಾಬರಿಗೊಂಡಳು. ಅವನ ಇಂಥ ನಾಟಕೀಯತೆ ಅವಳಿಗೆ ತುಂಬ ಕೃತಕ ಹಾಗೂ ಬೀಭತ್ಸ ಅನ್ನಿಸಿತು. ಇವನು ತನಗೇನೋ ಮೋಸ ಮಾಡುವ ಸಲುವಾಗಿಯೇ ಬಂದಿದ್ದಾನೆ ಎಂದುಕೊಂಡ ಅವಳು, ಇನ್ನೂ ರಕ್ತ ಚಿಮ್ಮುತ್ತಾ ಲವ್-ಡವ್‍ನೆ ಬಡಿದುಕೊಳ್ಳುತ್ತಿದ್ದ ಆ ಹೃದಯವನ್ನು ಕಾಲಿನಿಂದ ಒದ್ದು ಹೊರಟುಹೋದಳು.
ವಿಷಾದದ ನಗು ಹೊಮ್ಮಿಸುತ್ತಾ ಆ ಹೃದಯವನ್ನು ಮತ್ತೆ ಅದರ ಜಾಗದಲ್ಲೇ ಇರಿಸಿಕೊಂಡು ‘ಹೋದರೆ ಹೋಗ್ತಾಳೆ, ದೇಶದಲ್ಲಿ ಹುಡುಗಿಯರಿಗೇನು ದರಿದ್ರವೇ’ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡ. ಅವನು ಸ್ತ್ರೀ-ಪುರುಷ ಅನುಪಾತಕ್ಕೆ ಸಂಬಂಧಿಸಿದ ಜನಗಣತಿಯ ವರದಿಗಳನ್ನು ನಂಬುವುದಿಲ್ಲ. ‘ಅಂಕಿ ಅಂಶಗಳೆಲ್ಲಾ ಬರಿ ಸುಳ್ಳಿನ ಕಂತೆ’ ಎಂಬ ಯಾವನೋ ಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಲ್ಲಿ ಅವನಿಗೆ ಅಪಾರ ನಂಬಿಕೆ.
ರಾತ್ರಿ ಮಲಗುವಾಗ ಎದೆಯೊಳಗೆ ಎಲ್ಲೋ ಛುಳುಕ್ಕೆಂದಂತಾಯಿತು. ಆಶ್ಚರ್ಯದಿಂದ ನೋಡಿಕೊಂಡರೆ, ಗಾಯ ಮಾಯ್ದಿದೆಯಾದರೂ ಒಂದು ಚೂರು ಕಲೆ ಉಳಿದಿದೆ. ಮೊದಲ ಬಾರಿಗೆ ಅವನು ದೇವರ ಬಗ್ಗೆ ಅಸಮಾಧಾನಗೊಂಡ.
ಬೆಳಗ್ಗೆ ಎದ್ದ ಒಡನೆ ಕರಾರಿನ ಪ್ರತಿ ಹಿಡಿದುಕೊಂಡು ಲಾಯರ್ ಅಳಗಿರಿಯ ಬಳಿ ಹೋಗಿ, ‘ದೇವರ ಮೇಲೆ ಕೇಸು ಹಾಕಬೇಕು’ ಎಂದ. ಕೊರಳಲ್ಲಿ ನೇತಾಡುತ್ತಿದ್ದ ಭೂತಗನ್ನಡಿ ಹಿಡಿದು ಕೂಲಂಕಷವಾಗಿ ಕರಾರು ಪತ್ರ ಓದಿದ ಲಾಯರು 6ನೇ ನಿಬಂಧನೆಯ ಮೇಲೆ ಬೊಟ್ಟು ಮಾಡಿದ. ಅಲ್ಲಿ ಹೀಗಿತ್ತು...
6) ಮನಸ್ಸಿಗೆ ಆದ ಗಾಯಕ್ಕೆ ಈ ವರ ಅನ್ವಯಿಸುವುದಿಲ್ಲ.
ಓದಿಕೊಂಡ ಇವನ ಮುಖ ಮ್ಲಾನವಾಯಿತು. ದೇವರು ಕೂಡ ಹೀಗೆ ನಯವಂಚನೆ ಮಾಡಿದನಲ್ಲ ಎನಿಸಿ ದುಃಖ ಉಮ್ಮಳಿಸಿ ಬಂತು. ಕರಾರನ್ನು ಹರಿದು ಹಾಕಿ, ಲಾಯರಿಗೆ ಫೀಸು ಕೂಡ ಕೊಡದೆ ಎದ್ದು ಬಂದ.
ಗಾಯಗಳನ್ನು ವಾಸಿ ಮಾಡುವುದಕ್ಕೆ ದೇವರಿಗೆ ಸಾಧ್ಯವಿಲ್ಲದೇ ಇರಬಹುದು. ಆದರೆ ‘ಕಾಲ’ಕ್ಕೆ ಆ ಶಕ್ತಿ ಇದೆ.
ಅನತಿ ಕಾಲದಲ್ಲಿಯೇ ಅವನಿಗೆ ಮತ್ತೊಬ್ಬಳ ಪರಿಚಯವಾಯಿತು. ಅದೊಂದು ದಿನ ಅವಳು ಆಪ್ಯಾಯತೆಯಿಂದ ಅವನ ತಲೆಗೂದಲಲ್ಲಿ ಕೈಯಾಡಿಸಿ, ಹೌದೋ ಅಲ್ಲವೋ ಎಂಬಂತೆ ಕೆನ್ನೆಗೆ ತುಟಿ ಸೋಕಿಸಿದಾಗ ಅವನಿಗೆ ರೋಮಾಂಚನವಾಯಿತು. ಮರುಕ್ಷಣವೇ ತನ್ನ ಎದೆ ಬಗೆದು, ಹೃದಯ ಕಿತ್ತು ಅವಳ ಮುಂದಿರಿಸಿದ.
ನಕ್ಕಳು. ‘ಏನೋ ಇದು! ಕಲ್ಲು ಕೊಡ್ತಾ ಇದೀಯಲ್ಲೋ!’ ಎಂದು ಛೇಡಿಸಿದಳು.
ನೋಡುತ್ತಾನೆ! 900 ಗ್ರಾಂ ತೂಕದ ಕಲ್ಲು!
ಅದು ಕಲ್ಲಿನಂತೆ ಕಾಣುತ್ತಾ ಇದೆಯೋ? ಅಥವಾ ಕಲ್ಲೇಯೋ?
ಅವನಿಗೆ ತತ್ಕ್ಷಣಕ್ಕೆ ನಿರ್ಧರಿಸಲಾಗಲಿಲ್ಲ. ಪರೀಕ್ಷೆಗೋಸ್ಕರ ಲ್ಯಾಬಿಗೆ ಕಳಿಸಿದ.
ಅದನ್ನು ಕಿತ್ತು ತೆಗೆದ ಜಾಗ ಖಾಲಿಯಾಗಿಯೇ ಇದೆ.
ರೋಮಾಂಚನಗೊಳ್ಳಲು ಹೃದಯ ಇರಲೇ-ಬೇ ಕೆಂ ದಿ ಲ್ಲ.

*****
22-10-2008                                  - ಎಸ್ ಎನ್ ಸಿಂಹ, ಮೇಲುಕೋಟೆ.

mukta chanda


ಮುಕ್ತ ಛಂದ

     ಏಯ್! ನನಗೆ ಅರ್ಜೆಂಟಾಗಿ 5ಸಾವಿರ ರೂಪಾಯಿ ಬೇಕು ಕಣೋ! ಎಂದಳು.
     ಅದು ಅವನಿಗೆ ‘ಹೊನ್ನಿನ ಜಿಂಕೆ ಬೇಕು’ ಅಂದಂತೇನೂ ಕೇಳಿಸಲಿಲ್ಲ.
     ‘ಆ ಸೌಗಂಧಿಕಾ ಪುಷ್ಪ ತಂದು ಕೊಡೋ ಭೀಮಾ’ ಎಂಬ ದನಿಯ ಬಿಸುಪಿತ್ತು ಅದರಲ್ಲಿ.
     ಆದರೂ ಗಂಡಸಿನ ದುಷ್ಟಬುದ್ಧಿ!
     ಯಾಕೆ? ಅಂದ.
     ಅಪ್ಪನ ತಿಥಿ ಇದೆ. ಪೆಂಡಾಲಿನವನಿಗೆ ಅಡ್ವಾನ್ಸು ಕೊಡಬೇಕು ಅಂದಳು.
     ಅವನಿಗೆ ಯಾರೋ ಹೇಳಿದ್ದರು. ‘ಹೆಂಗಸು ಸುಳ್ಳು ಹೇಳುತ್ತಿದ್ದಾಳೆ ಎಂಬುದು ಅರಿವಾದಾಗ ಹೆಚ್ಚು ಕೆದಕಬಾರದು. ಕೆದಕಿದರೆ ಸುಳ್ಳು ಸರಮಾಲೆಯಾಗುತ್ತೆ’ ಅಂತ. ಅಲ್ಲದೆ ಹೆಂಗಸಿನ ಧಾರ್ಮಿಕ ಶ್ರದ್ಧೆಯನ್ನು ಪೋಷಿಸಬೇಕಾದದ್ದು ಗಂಡಸಿನ ಸ್ವಾರ್ಥವೇ ತಾನೆ! ಮರುಪ್ರಶ್ನೆ ಮಾಡದೆ ಹೇಗೋ ಹಣ ಹೊಂದಿಸಿ ಕೊಟ್ಟ.
    
     ಮುಂದಿನ ಸಲ ಭೇಟಿಯಾದಾಗ ಅವಳ ಕೈಲೊಂದು ಮೊಬೈಲಿತ್ತು. ‘ತುಂಬ ಹಿಂದೇನೇ ಅಪ್ಪ ಸಿಂಗಪೂರಿಂದ ಹ್ಯಾಂಡ್‍ಸೆಟ್ ತಂದುಕೊಟ್ಟಿದ್ದ. ಈಗ ಹಳ್ಳಿಗೆ ಟವರ್ ಬಂತು. ಆ್ಯಕ್ಟಿವೇಟ್ ಮಾಡಿಸಿದೆ’ ಅಂದಳು. ನಿಜವೇ! ಅದೇನೂ ಪೂರ್ತಿ ಸುಳ್ಳಲ್ಲ. ಅಪ್ಪನ ‘ದೆಸೆ’ಯಿಂದ ದೊರೆತದ್ದೇ ಅದು!
     ಅಲ್ಲಿಂದ ಮುಂದೆ ಅವನಿಗೆ ‘ಹೆಣ್ಣು ಒಂದು ಕಾವ್ಯದಂತೆ’ ಎಂಬ ಮಾತಿನ ಅರ್ಥ ಆಗತೊಡಗಿತು...
     ಸೀತೆಯ ಕಥೆ ಹೇಳಲು ವಾಲ್ಮೀಕಿಗೆ ಚೌಪದಿ ಸಾಕಾಯಿತು.
     ‘ಭಾರತ’ ಹೇಳಲು ಕುಮಾರವ್ಯಾಸನಿಗೆ ಷಟ್ಪದಿ ಬೇಕಾಯಿತು.
     ಆಧುನಿಕ ಕವಿಯೊಬ್ಬನಿಗೆ ಐದು ಸಾಲಿನ ಕವಿತೆ ‘ದ್ರೌಪದಿ’ಯಾಗಿ ಕಂಡಿತು.
     ತಲೆತಲಾಂತರದಿಂದಲೂ ‘ಕಾವ್ಯ’ ಚೌಪದಿ-ಷಟ್ಪದಿಗಳ ನಡುವೆ ಓಲಾಡುತ್ತಲೇ ಇದೆ!
    
     ಆದರೆ ಕೈಗೆ ಮೊಬೈಲು ಸಿಕ್ಕ ಹೆಣ್ಣು ಒಂದು ಮಹಾಕಾವ್ಯ!
     ಬಹುನಾಯಕರುಳ್ಳ ಕಾವ್ಯ!
     ಅದು ಸಪ್ತಪದಿಗೂ ದಕ್ಕುವುದಿಲ್ಲ.
     ಅದಕ್ಕೆ ಸರಿಯಾದದ್ದು ‘ಮುಕ್ತಛಂದ’!
     ಅದಾವ ಪುಣ್ಯಾತ್ಮ ನಿಘಂಟಿನಲ್ಲಿ ಛಂದಶ್ಶಬ್ದಕ್ಕೆ ‘ಶೀಲ’ ಎಂಬ ಅರ್ಥವೂ ಇದೆಯೆಂದು ಟಂಕಿಸಿದನೋ!
     ಇದಾವುದೂ ಅವನಿಗೆ ಕೊನೆಯವರೆಗೂ ಗೊತ್ತಾಗಲಿಲ್ಲ.

*****
     14-06-2008                             - ಎಸ್ ಎನ್ ಸಿಂಹ, ಮೇಲುಕೋಟೆ.

saitaanana kanasu


ಸೈತಾನ(ಸ)ನ ಕನಸು
    
"ಪ್ರಭೂ" ಎಂದಿತು ಮರಿಪಿಶಾಚಿ.
     ಹೊಟ್ಟೆ ಬಿರಿಯ ಒಂಟೆಯ ಮಾಂಸ ತಿಂದು, ತನ್ನ ನಾಲ್ಕನೇ ಹೆಂಡತಿಯನ್ನು ತೊಡೆಯಮೇಲೆ ಕೂರಿಸಿಕೊಂಡು ತೂಕಡಿಸುತ್ತಿದ್ದ ಸೈತಾನ(ಸ) ಬೆಚ್ಚಿಬಿದ್ದು ಎದ್ದು ಕುಳಿತ.
     "ಸರ್ವಶಕ್ತನೇ ನನ್ನ ಕರ್ತವ್ಯವೇನು?" ಎಂದು ಕೇಳಿತು ಮರಿಪಿಶಾಚಿ.
     ನಿದ್ದೆಗಣ್ಣನ್ನು ಹೊಸಕಿಕೊಂಡು ಎದುರಿಗಿದ್ದ ಗೋಲವನ್ನು ತೀಕ್ಷ್ಣವಾಗಿ ನಿರುಕಿಸುತ್ತಾ, ಹೂಂ 193 ದೇಶಗಳಲ್ಲಿ 49 ದೇಶಗಳು ನನ್ನ ವಶಕ್ಕೆ ಬಂದಾಗಿವೆ. ಉಳಿದಕಡೆಗಳಲ್ಲಿ ನಿನ್ನ ಸೋದರರು "ಜೆಹಾದ್" ಮೂಲಕ ಸಂಕ್ಷೋಭೆ ಉಂಟುಮಾಡುತ್ತಿದ್ದಾರೆ. ಅದುಸರಿ, ನೀನೇಕೆ ವಾಪಸು ಬಂದೆ? ಎಂದ ಸೈತಾನ(ಸ).
     "ಪ್ರಭೂ, ಹಿಂದುಸ್ತಾನಕ್ಕೆ ಹೋಗಿದ್ದೆ. ಅಲ್ಲಿಯ ಜನ ತಂತಮ್ಮಲ್ಲಿ ತಾವೇ ಹೊಡೆದಾಡಿಕೊಳ್ಳುತ್ತಿದ್ದಾರೆ. ನನಗೇನೂ ಕೆಲಸ ಕಾಣಲಿಲ್ಲ. ಅದಕ್ಕೇ ವಾಪಸು ಬಂದುಬಿಟ್ಟೆ"
     ಮುಠ್ಠಾಳ! ಎಷ್ಟೇ ಅರಾಜಕತೆ, ಸಂಕ್ಷೋಭೆ ಇದ್ದರೂ; ಹಿಂದೂ ಹೆಂಗಸರು ಸುಶೀಲರಾಗಿರುವವರೆಗೂ ಆ ದೇಶವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಹೋಗು, ಹಿಂದೂ ಹೆಂಗಸರನ್ನು ಕುಲಗೆಡಿಸಿ ನಮ್ಮ ಜನಾನಾಕ್ಕೆ ಸೇರಿಸಿಕೊಂಡುಬಿಡು.
     ಎಲ್ಲಿಂದ ಶುರು ಮಾಡಲಿ ಪ್ರಭೂ?
     ಅಯೋಗ್ಯ! ಪ್ರತಿಯೊಂದನ್ನೂ ನಾನೇ ಹೇಳಿಕೊಡಬೇಕೆ? ಅತೃಪ್ತಿಯಿಂದ ಕುದಿಯುತ್ತಿರುವ, ಕರ್ಮಠರ ಕಟ್ಟುಪಾಡುಗಳಿಂದ ಬೇಸತ್ತಿರುವ ಬಾಮಣ್ ಹುಡುಗಿಯರಿಗೆ ಬಲೆ ಬೀಸು. ಸುಲಭವಾಗಿ ದಕ್ಕುತ್ತಾರೆ. ಆ “ನರಸತ್ತ ಪುಳಿಚಾರುಗಳು ತಮ್ಮ ಹೆಂಗಸರಿಗೆ ಬೇಕಾದ್ದನ್ನು ಕೊಡುವ ಸ್ಥಿತಿಯಲ್ಲಿಲ್ಲ" ಎಂಬ ಭ್ರಮೆಯನ್ನು ಅವುಗಳೇ ನಂಬುವಂತೆ ಮಾಡಿದ್ದೇನೆ! ಅದಕ್ಕೆ ಪುಷ್ಟಿ ನೀಡುವಂತೆ, “ಪೊಳ್ಳು ಶ್ರೇಷ್ಠತೆ” ಹಾಗೂ “ಜಿಹ್ವಾಸುಖದ ಜಡತ್ವ”ಕ್ಕೆ ಬಲಿಯಾಗಿ ಆ ಪುಳಿಚಾರುಗಳೂ ತಮ್ಮ ಮೂಲಭೂತ ಅಗತ್ಯವನ್ನೇ ಮರೆತಿವೆ. "ಸ್ಟೇಟಸ್"ಗೋಸ್ಕರ ಅವು ಮೂಗಿಗೆ ಕವಡೆ ಕಟ್ಟಿಕೊಂಡು ಓದುತ್ತವೆ. ನಲವತ್ತಾದರೂ ಮದುವೆ ಮಾಡಿಕೊಳ್ಳದೆ ಒದ್ದೆ ಕೌಪೀನ ಬಿಗಿದುಕೊಂಡು ಡಾಲರ್ ಸಂಪಾದನೆಗೆ ತೊಡಗುತ್ತವೆ. ಅವು ನಿರ್ಲಕ್ಷಿಸಿರುವ ಫಲವತ್ತಾದ ಕ್ಷೇತ್ರಗಳಲ್ಲಿ ನಮ್ಮ ಸಂತಾನಗಳನ್ನು ಬೆಳೆಸು ಹೋಗು.
     ತುಂಬ ಸ್ಪರ್ಧೆ ಇದೆ ಒಡೆಯಾ. ಆ ಹೆಂಗಸರು ಅಷ್ಟು ಸುಲಭದಲ್ಲಿ ನಮಗೆ ದಕ್ಕುವುದಿಲ್ಲ. “ಉಳಿದವ”ರೇ ಆ ಕೆಲಸ ಮಾಡುತ್ತಿದ್ದಾರೆ.
     ಪಾಪಿ ಮುಂಡೇದೇ! ಸುನ್ನತ್ ಮಾಡಿರುವ ನಿನ್ನ ಆಯುಧದ ವರಸೆ ತೋರಿಸು. ಅತ್ತರಿನ ವಾಸನೆಗೆ ಜನ್ಮ ಜನ್ಮಕ್ಕೂ ನಿನ್ನನ್ನೇ ಹುಡುಕಿಕೊಂಡು ಬರುತ್ತವೆ ಅವು. ಆದರೆ ಎಚ್ಚರಿಕೆ! ಅವುಗಳನ್ನು ತೃಪ್ತಿಪಡಿಸುವುದರಲ್ಲೇ ಮೈಮರೆತುಬಿಡಬೇಡ. ನೀನೇ ನಾಶವಾಗಿ ಹೋಗುತ್ತೀಯೆ. ನಿನ್ನ ಪೂರ್ವಜರು ಮಾಡಿದಂತೆ ಜನಾನಾಗಳಲ್ಲಿ ಆ ಹೆಂಗಸರನ್ನು ತುಂಬಿಕೋ. ತಿಂಗಳುಗಟ್ಟಲೆ ಉಪವಾಸ ಕೆಡವಿ., ಯಾವಾಗಲೋ ಒಮ್ಮೆ ಮಾತ್ರ ಬಳಸಿಕೋ. ಆಗ ನಿನ್ನ ಒಂದು ಸ್ಪರ್ಶಕ್ಕೇ ನೀರಾಗಿಬಿಡುತ್ತವೆ ಅವು. ನಮ್ಮ "ಮೈಸೂರು ಹುಲಿ" ಮುಂತಾದವರೆಲ್ಲ ಹಾಗೆಯೇ ಅಲ್ಲವೇ ಮಾಡಿದ್ದು.
     ಆದರೆ ಪ್ರಭೂ, ಅವು ನಮ್ಮ ಹೆಂಗಸರಂತೆ ಅವಿದ್ಯಾವಂತರಲ್ಲ. ತುಂಬಾ ಓದಿಕೊಂಡಿರುತ್ತವೆ. ಬಲೆಗೆ ಬಿದ್ದರೂ ಶಾಶ್ವತವಾಗಿ ನಮ್ಮ ಅಡಿಯಾಳಾಗಿ ಉಳಿಯುವುದಿಲ್ಲ. ಕೆಲವಂತೂ ಮದುವೆಯೇ ಬೇಡ ಅಂತ ಸ್ವತಂತ್ರವಾಗಿ ಸಂಪಾದಿಸಿಕೊಳ್ತಾ ಮುದುಕಿಯರಾದರೂ ಒಂಟಿಯಾಗಿಯೇ ಇರುತ್ತವೆ.
     ದಡ್ಡ ಮುಂಡೇದೇ! ಇನ್ನೂ ಒಳ್ಳೆಯದೇ ಅಲ್ವೇನೋ. ಸಂತತಿ ಇಲ್ಲದೆ ಅಂತರ್ಪಿಶಾಚಿಗಳಂತೆ ಬದುಕುವ ಅವುಗಳಿಂದ ನಮಗೇ ಲಾಭ. ಮಿಕ್ಕವರನ್ನು ಜಾತಿಗೆಡಿಸು ಹೋಗು. ಸಾವಿರ ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸವನ್ನು ಮುಂದುವರೆಸು.
     ಆದರೂ ಪ್ರಭುವೇ... ಆ ಆರೆಸ್ಸೆಸ್ ಭಂಟರದೇ ಭಯ. ಬಲಿಷ್ಠ ಪಡೆಯನ್ನೇ ನಿರ್ಮಾಣ ಮಾಡಿಬಿಟ್ಟಿವೆ ಅವು. ಅವರ ಹುಡುಗಿಯರತ್ತ ಕಣ್ಣೆತ್ತಿ ನೋಡಿದರೆ ಸಾಕು, ಸೌದಿಯಲ್ಲಿ ನಾವು ಮಾಡುವಂತೆಯೇ ಮಾಡಿಬಿಡುತ್ತವೆ.
     ಅಯ್ಯೋ ಹುಚ್ಚು ಮುಂಡೇದೇ! ಆ ಚೆಡ್ಡಿಗಳು ಬಲಿಷ್ಠವಾಗಿವೆಯೇನೋ ನಿಜ. ಆದರೆ ಮರ್ಮಛೇದನ ಮಾಡುವಂತಹ ನಮ್ಮಷ್ಟು ಕ್ರೌರ್ಯ ಅವಕ್ಕೆ ಎಲ್ಲಿಂದ ಬರಬೇಕು? ಅವೇನಾದರೂ ನಮ್ಮನ್ನು ತುಸು ಮುಟ್ಟಿದರೂ ಸಾಕು, ದೇಶದೆಲ್ಲೆಡೆಯ ಬುದ್ಧಿಜೀವಿಗಳು ಮಾತ್ರವಲ್ಲ, ಇಡೀ ಸರ್ಕಾರವೇ ನಮ್ಮ ಪರ ವಕಾಲತ್ತು ವಹಿಸುತ್ತದೆ. ಅಲ್ಲದೆ ಆ ಚೆಡ್ಡಿಗಳು ಹೆಂಗಸರನ್ನು ಗೌರವಿಸುತ್ವೆ ಕಣೋ. ಕುದಿಯುವ ಕಾಮದ ಕುಲುಮೆಗಳಿಗೆ ಗೌರವ ಬೇಕಿಲ್ಲಪ್ಪಾ. ತಮ್ಮನ್ನು ತಣಿಸೋ ಜನಕ್ಕಾಗಿ "ಕಾದಿವೆ" ಅವು. ಅಂಥಾ ಹೊತ್ತಿನಲ್ಲಿ ಗೌರವ ತೋರಿಸೋ ಸಂಭಾವಿತರನ್ನು ನಾಮರ್ದರು ಅಂತ ಭಾವಿಸುತ್ತವೆ ಆ ಹುಡುಗಿಯರು. ಹ್ಹ! ಹ್ಹಾ! ಸಾವಿರ ವರ್ಷಗಳ ಹಿಂದೆ ಇದೇ ಪುಳಿಚಾರುಗಳ ಮೇಧಾಶಕ್ತಿಗೂ ವರ್ಣಸೌಷ್ಠವಕ್ಕೂ ಹೋಮಧೂಮಾನ್ವಿತಸ್ವೇದಗಂಧಕ್ಕೂ ಮರುಳಾಗಿ ಉಳಿದ ಹೆಂಗಸರೆಲ್ಲ ಅವುಗಳ ಸಂಗಕ್ಕಾಗಿ ಹಾತೊರೆಯುತ್ತಿದ್ದರು. ಈ ಸಾವಿರ ವರ್ಷಗಳಲ್ಲಿ ತುಂಬ ಶ್ರಮಪಟ್ಟು, ಹಣ ಸಂಪಾದನೆಯನ್ನೇ ಪುಳಿಚಾರುಗಳ ಮುಖ್ಯ ಗುರಿಯನ್ನಾಗಿಸಿ, ಮೂಲಭೂತ ಅಗತ್ಯದ ಆಕರ್ಷಣೆಯಿಂದ ಅವುಗಳನ್ನು ದೂರೀಕರಿಸಲಾಗಿದೆ. ಹೋಗು. ಇಂಥಾ ಸುಸಂದರ್ಭವನ್ನು ವ್ಯರ್ಥ ಮಾಡಬೇಡ. ಅಲ್ಲ, ಇಷ್ಟೆಲ್ಲ ಕಣಿ ಮಾಡ್ತಿದೀಯಲ್ಲ, ನೀನೇನಾದರೂ ಖೊಜ್ಜನೋ?
     ಇಲ್ಲ ಇಲ್ಲ ಮಹಾಪ್ರಭೂ! ಅತ್ತರಿನ ವಾಸನೆ ತೋರಿಸಿಯೇ ನೂರಾರು ಕಾಲೇಜು ಹುಡುಗಿಯರನ್ನು ಪಟಾಯಿಸಿದ್ದೇನೆ. ಆದರೆ ಪ್ರಭೂ, ಸಾವಿರ ವರ್ಷಗಳಿಂದ ನಮ್ಮ ನವಾಬರು, ಜಹಾಂಪನಾಗಳು ಪ್ರಯತ್ನ ಪಟ್ಟರೂ, ಈ ದೇಶದ ಸಮಸ್ತ ಹೆಂಗಸರನ್ನೂ ಇನ್ನೂ ಯಾಕೆ ಪೂರ್ತಿ ಭ್ರಷ್ಟರನ್ನಾಗಿಸಲು ಸಾಧ್ಯವಾಗಿಲ್ಲ?
     ನಿರುತ್ತರನಾದ ಸೈತಾನ(ಸ)ನ ಕಣ್ಣುಗಳು ಕಿಡಿಕಾರಿದವು. ಮಾತೇ ಆಡದೆ ರೊಪ್ಪನೆ ಆ ಮರಿಪಿಶಾಚಿಯ ಪೃಷ್ಠಕ್ಕೆ ಒದ್ದ ಸೈತಾನ(ಸ). ಬೃಹತ್ ಭಾರತದ ಯಾವುದೋ ಕಾಲೇಜೊಂದರ ಕ್ಯಾಂಪಸ್ಸಿನಲ್ಲಿ ಮ್ಲೇಂಛ ಯುವಕನ ರೂಪ ಹೊತ್ತು ಬಿತ್ತು ಆ ಮರಿಪಿಶಾಚಿ.

*****
08-03-2007                                       - ಎಸ್ ಎನ್ ಸಿಂಹ. ಮೇಲುಕೋಟೆ

yaarige enu beku


ಯಾರಿಗೆ ಏನು ಬೇಕು...!

     ಅವರಿಬ್ಬರೂ ತುಂಬ ಕಷ್ಟಪಟ್ಟುಕೊಂಡು, ಪ್ರಾಣಾಪಾಯವನ್ನೂ ಲೆಕ್ಕಿಸದೆ ಆ ಶಿಖರದ ತುದಿಗೆ ಬಂದಿದ್ದರು. ತಮ್ಮ ಸಂದೇಹಗಳಿಗೆ ನಿಶ್ಚಿತವಾದ ಸಮಾಧಾನ ಪಡೆಯುವ ನಿರೀಕ್ಷೆ ಅವರನ್ನು ಅಲ್ಲಿಗೆ ತಂದಿತ್ತು. ಮೂಳೆ ಕೊರೆಯುವ ಛಳಿಯಲ್ಲೂ ಅಲ್ಲೊಬ್ಬ ಯೋಗಿ ಮಂದಹಾಸ ಬೀರುತ್ತಾ ಕುಳಿತಿದ್ದ. ತಮ್ಮ ಜನ್ಮ ಸಾರ್ಥಕವಾಯಿತೆಂದು ಅವರಿಬ್ಬರೂ ಕಟಕಟಿಸುತ್ತಿದ್ದ ಹಲ್ಲುಗಳನ್ನು ತಹಬಂದಿಗೆ ತಂದುಕೊಳ್ಳುತ್ತಾ ಅವನನ್ನು ಪ್ರಶ್ನಿಸಿದರು.
     ಅವರಿಬ್ಬರೂ ಕೇಳಿದ್ದು ಒಂದೇ ಪ್ರಶ್ನೆಯಂತೆ ಯೋಗಿಗೆ ಭಾಸವಾಯ್ತು. ಎಷ್ಟಾದರೂ ಸಮದರ್ಶಿ! ಆದರೆ ಅವನಿಗೆ ಗೊತ್ತಿತ್ತು; ಪ್ರಶ್ನೆಗಳು ಒಂದೇ ಆದರೂ, ಕಾಲ, ದೇಶ ಮತ್ತು ಮುಖ್ಯವಾಗಿ; ಕೇಳುಗರ ಯೋಗ್ಯತೆಯನ್ನವಲಂಬಿಸಿ ಉತ್ತರಗಳು ಮಾತ್ರ ಬೇರೆಯೇ ಇರುತ್ತವೆ ಎಂದು!
     ಅವಳು ಕೇಳಿದ್ದಳು – ಗಂಡಸಿಗೆ ಬೇಕಾದುದೇನು?
     ಅವನು ಕೇಳಿದ್ದ - ಹೆಂಗಸಿಗೆ ಬೇಕಾದುದೇನು?
     ಮೃದು ಮಂದಹಾಸ ಬೀರುತ್ತಾ ಯೋಗಿ ಹೇಳತೊಡಗಿದ...
     “ಗಂಡಸಿಗೆ ಹೆಂಗಸಿನ ಮುಗ್ಧತೆ ಬೇಕು. ಅವಳು ಕೊಡುವ ಆತ್ಮವಿಶ್ವಾಸ ಬೇಕು. ಅವಳ ಮುಗ್ಧತೆ ಅವನಿಗೆ ಸಂತೋಷ ಕೊಡುತ್ತದೆ. ಅವಳು ತುಂಬುವ ಆತ್ಮವಿಶ್ವಾಸ ಅವನಿಗೆ ಭದ್ರತೆಯ ಭಾವ ನೀಡುತ್ತದೆ” ಎಂದು ಹೇಳಿದ ಅವನು, ಮುಂದುವರಿದು ಕೊಂಚ ಬಾಗಿ, ಅವಳ ಕಿವಿಯಲ್ಲಿ ಪಿಸುಗುಟ್ಟಿದ. “ಹೆಂಗಸಿನ ತಾಜಾತನದಷ್ಟು, ಅವಳ ನಿಷ್ಠೆಯಷ್ಟು, ಗಂಡಸನ್ನು ಮುದಗೊಳಿಸುವ ಸಂಗತಿ ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಅದು ಅವನ ಅಹಂ ಅನ್ನು ಸಂಪೂರ್ಣ ತೃಪ್ತಿಪಡಿಸುತ್ತದೆ...”
     ಕಿವಿ ನಿಮಿರಿಸಿ ಆ ಮಾತುಗಳನ್ನು ಕೇಳಿಸಿಕೊಳ್ಳುವ ವಿಫಲ ಯತ್ನ ನಡೆಸುತ್ತಾ ಗಂಡಸು ಕೇಳಿದ. “ನನ್ನ ಪ್ರಶ್ನೆಗೆ ಉತ್ತರಿಸಿ ಗುರೂಜೀ, ಹೆಂಗಸಿಗೆ ಬೇಕಾದ್ದೇನು? ಗಂಡಸಿನ ಐಶ್ವರ್ಯವಾ? ಅವನ ಅಧಿಕಾರವಾ? ಅಥವಾ ಅವನ ಬಲಿಷ್ಠತೆಯಾ? ಇಲ್ಲಾ ಅವನ ಅನನ್ಯ, ಪರಿಶುದ್ಧ ಪ್ರೀತಿಯಾ? ಯಾವುದು? ಎಂದ.
     ಒಂದು ನಿಟ್ಟುಸಿರು ಬಿಟ್ಟು ನುಡಿದ ಯೋಗಿ;
     “ಮಗೂ, ಇದಕ್ಕೆ ನಿಖರವಾದ ಯಾವ ಉತ್ತರವೂ ಇಂದಿನವರೆಗೂ ಪ್ರಪಂಚದ ಯಾವ ಮೇಧಾವಿಗೂ ಸಿಕ್ಕಿಲ್ಲ. ದುರಂತವೆಂದರೆ ಅದು ಸ್ವಯಂ ಹೆಂಗಸಿಗೂ ಗೊತ್ತಿಲ್ಲ! ಹೇಳಲೇಬೇಕೆಂದರೆ ಅವಳಿಗೆ ಅದೆಲ್ಲವೂ ಬೇಕು! ಗಂಡಸಿನಲ್ಲಿ ಇನ್ನೂ ಏನಾದರೂ ಇದ್ದರೆ ಅದಕ್ಕಿಂತಲೂ ಅತಿರಿಕ್ತವಾದದ್ದು ಅವಳಿಗೆ ಬೇಕು! ಒಂದೊಮ್ಮೆ ಅವಳ ಎಲ್ಲ ಅಪೇಕ್ಷೆಗಳನ್ನು ಪೂರೈಸಿದರೂ, ಅದಕ್ಕಿಂತ ಮತ್ತೂ ಹೆಚ್ಚಿನದು ಅವಳಿಗೆ ಬೇಕು! ಹೆಂಗಸಿನ ಅಪೇಕ್ಷೆ ಎನ್ನುವುದು ಒಂದು ಬಗೆಯ ‘ಚಿರಂತನ ಅಪರ್ಯಾಪ್ತ ದ್ರಾವಣ’ದ ಹಾಗೆ! ದ್ರೌಪದಿಯ ಮಾತು ಗೊತ್ತಲ್ಲ? ‘ಪಂಚ ಮೇ ಪತಯಃ ಸಂತಿ ಷಷ್ಠಸ್ತು ಮಮ ರೋಚತೇ’...”
     ಇನ್ನೂ ಏನೇನು ಹೇಳುತ್ತಿದ್ದನೋ ಆ ಯೋಗಿ; ಅಷ್ಟರಲ್ಲಿ ಸಿಟ್ಟಿನಿಂದ ಎದ್ದು ನಿಂತ ಅವಳು ಭುಸುಗುಡುತ್ತಾ ಚೀರಿದಳು; “ಮೂರ್ಖರೇ! ಹೆಂಗಸಿಗೆ ಅದ್ಯಾವುದೂ ಬೇಕಿಲ್ಲ. ಅವಳಿಗೆ ಸ್ವಾತಂತ್ರ್ಯ ಬೇಕು. ಶತಶತಮಾನಗಳ ನಿಮ್ಮ ಶೋಷಣೆಗೆ, ವಂಚನೆಗೆ ಪ್ರತೀಕಾರ ಬೇಕು! ಹೂಂ! ಪ್ರತೀಕಾರ ಬೇಕು!”
     ಹಾಗೆ ಹೇಳುತ್ತಾ ದಡದಡನೆ ಬೆಟ್ಟವಿಳಿದು ತಪ್ಪಲಿಗೆ ಬಂದ ಅವಳು...
     ಒಬ್ಬ ಜರ್ನಲಿಸ್ಟ್ ಆಗಿಬಿಟ್ಟಳು!

*****
ಡಿಸೆಂಬರ್ 2006ರ ಓ ಮನಸೇ-39ರಲ್ಲಿ ಪ್ರಕಟಿತ.             - ಎಸ್ ಎನ್ ಸಿಂಹ. ಮೇಲುಕೋಟೆ

theory of


ಥಿಯರಿ ಆ¥sóï...
    
ಮೊದಲು ಅವನು ಒಂದು ಪುಸ್ತಕದ ಹುಳುವಾಗಿದ್ದ.
      ಇತ್ತೀಚೆಗೆ ‘ವೆಬ್ ಕ್ರಿಮಿ’ಯಾಗಿಬಿಟ್ಟ.
      ಕಂಪ್ಯೂಟರಿಗೆ ‘ಕಿವಿ-ಬಾಯಿ’ ಅಳವಡಿಸಿದ ಮೇಲಂತೂ ಸ್ನೇಹಿತರನ್ನು ಕೂಡ ದೂರೀಕರಿಸಿದ.
      ಯಂತ್ರದ ಒಡನಾಟವೇ ಅವನ ಪ್ರಪಂಚವಾಗಿಹೋಯ್ತು.
      ಆದರೂ ಅವನು ಮನುಷ್ಯನೇ ತಾನೆ.
      ಕೆಲವೊಮ್ಮೆ ಇದ್ದಕ್ಕಿದ್ದಂತೆ ಅವನಲ್ಲಿ ಪ್ರಶ್ನೆಗಳು ಹುಟ್ಟಿಬಿಡುತ್ತಿದ್ದವು!
      ಅಂಥ ಒಂದು ಸಂದರ್ಭದಲ್ಲಿ ಕಂಪ್ಯೂಟರನ್ನು ಕೇಳಿದ.
      “ಸಮಾನ ಅಭಿರುಚಿಗಳಿಲ್ಲ ಎಂದು ತಿಳಿದ ಮೇಲೂ ಒಂದು ವ್ಯಕ್ತಿಯತ್ತ ಅತೀವ ಆಕರ್ಷಣೆ ಉಳಿಸಿಕೊಂಡಿರುವವರನ್ನು ಏನಂತ ಕರೀತಾರೆ?” ಎಂದ.
ಥೌಸಂಡ್ ಗಿಗಾಹಟ್ರ್ಸ್ ಸ್ಪೀಡಿನ ಮಲ್ಟಿ ಕೋರ್ ಪ್ರೊಸೆಸರ್ ಮತ್ತು ಒಪೆರಾ-5 ಸುಪರ್ ಫಾಸ್ಟ್ ಸರ್ಚ್ ಎಂಜಿನ್ ಹೊಂದಿದ್ದ ಆ ಸೂಪರ್ ಕಂಪ್ಯೂಟರಿಗೆ ಕೂಡ ಇದಕ್ಕೆ ಉತ್ತರಿಸಲು 30 ಸೆಕೆಂಡ್ ಬೇಕಾಯಿತು. ಮೂವತ್ತು ದೀ...ರ್ಘ ಟೆನ್ಷನ್ನಿನ ಯುಗಗಳು!
ಲಿಕ್ವಿಡ್ ಕ್ರಿಸ್ಟಲ್ ಡಿಸ್‍ಪ್ಲೇ ಪರದೆಯ ಮೇಲೆ ‘ಅಮರ ಪ್ರೇಮಿ’ ಎಂಬ ಅಕ್ಷರಗಳು ಮೂಡುತ್ತವೆ ಎಂಬ ನಿರೀಕ್ಷೆಯಲ್ಲಿ ಅತ ತನ್ನ ಕಣ್ಣುಗಳನ್ನು ಕೀಲಿಸಿಬಿಟ್ಟ.
ಆಗ ಅವನ ಹೃದಯದ ಕಂಪನದ ತೀವ್ರತೆ ತಿಳಿಯಲು ಸ್ಟೆತಾಸ್ಕೋಪ್ ಸಾಲುತ್ತಿರಲಿಲ್ಲ. ಭೂಕಂಪದ ತೀವ್ರತೆ ಅಳೆಯಲು ಇರುವ ‘ರಿಕ್ಟರ್ ಮಾಪಕ’ವನ್ನೇ ಇಡಬೇಕಿತ್ತು!
31ನೆಯ ಸ್ಫೋಟದ ಕ್ಷಣ...!
ಇಡೀ ಪರದೆಯ ತುಂಬ ಎರಡೇ ಅಕ್ಷರಗಳು.
ಮೂರ್ಖ!
ಸ್ತಂಭಿಸಿ ಹೋದ. ಮುಖಕ್ಕೆ ನುಗ್ಗಿದ್ದ ರಕ್ತವೆಲ್ಲ ಒಮ್ಮೆಗೇ ಇಳಿದು ಹೋಯ್ತು.
ಯೂ ಬ್ಯಾಸ್ಟರ್ಡ್! ದರಿದ್ರ ಯಂತ್ರವೇ! ಎಂದು ಅರಚಿದ.
ಶಾಂತವಾದ ಧ್ವನಿಯಲ್ಲಿ ಕಂಪ್ಯೂಟರ್ ಹೇಳಿತು. ಸಮಾಧಾನ ಫ್ರೆಂಡ್. ನೀನೀಗ ಅನುಭವಿಸಿದ ನೋವು ಎಷ್ಟು ಗೊತ್ತಾ? 9 ಡಾಲ್ಸ್! ಅಂದರೆ ಭೂಮಿಯ ಮೇಲೆ ಜೀವಿಯೊಂದು ಸಹಿಸಬಹುದಾದ ಮ್ಯಾಕ್ಸಿಮಮ್ ನೋವು, ಅರ್ಥಾತ್ ಪ್ರಸವ ವೇದನೆಗಿಂತ ಅರ್ಧ ಪಾಯಿಂಟ್ ಮಾತ್ರ ಕಮ್ಮಿ.
ಅದ್ಹೇಗೆ? ನನಗೆ ಯಾಕೆ ನೋವಾಗುತ್ತೆ? ಹೋಗ್ಹೋಗು..
ನನ್ನ ಹತ್ರಾನೇ ಬುದ್ಧಿವಂತಿಕೆಯ ಗೇಂ ಆಡಬೇಡ. ನಿನ್ನ ದೇಹದಲ್ಲಿ ಅಳವಡಿಸಿರೋ ಮೈಕ್ರೋಚಿಪ್ ನನಗೆಲ್ಲ ತಿಳಿಸಿಬಿಡುತ್ತೆ. ನೀನು ನನ್ನ ಬೈದ್ರೂ ಅಡ್ಡಿ ಇಲ್ಲ. ನಿನಗೆ ಸಹಾಯ ಮಾಡಬೇಕಾದ್ದು ನನ್ನ ಕರ್ಮ. ಈಗ ಸುಮ್ಮನೆ ನನ್ನ ಪ್ರಶ್ನೆಗಳಿಗೆ ಉತ್ತರಿಸು. ನಿನ್ನ ಸಮಸ್ಯೆ ಪರಿಹರಿಸೋಕೆ ಸಾಧ್ಯವೋ ನೋಡೋಣ.
ತನ್ನೊಳಗೇ ಏನೋ ಗೊಣಗಿಕೊಂಡ. ಆದರೂ ಗೋಣು ಹಾಕಿದ.
ಕೇಳಿತು.
ನೀನು ಯಾರನ್ನೋ ಪ್ರೀತಿಸ್ತಾ ಇದೀಯ ಮತ್ತು ವಿಫಲನಾಗಿದೀಯ. ಹೌದಾ?
ಹೌದು.
ಅವಳಿಗೆ ಏನಾದ್ರೂ ಪ್ರೆಸೆಂಟ್ ಮಾಡಿದೀಯಾ? ಬೆರಳಿಗೆ ಒಂದು ರಿಂಗ್, ಕಿವಿಗೊಂದು ಲೋಲಾಕು ಅಥವಾ ನೆನಪುಳಿಯುವಂಥ ವಿಶೇಷವಾದ್ದೇನಾದ್ರೂ?
ಇಲ್ಲ.
ಓಹ್! ಇರ್ಲಿ. ಅವಳು ಕಂಡ ತಕ್ಷಣ ಸಿಗರೇಟ್ ಎಸೆದುಬಿಟ್ಟು ತಪ್ಪಿತಸ್ಥನಂತೆ ಪೋಸು ಕೊಟ್ಟಿದೀಯಾ?
ಐ! ನಾನು ಫಫ್ ಹೊಡೆಯೋದೇ ಇಲ್ವೇ.
ಬುದ್ದೂ! ಅಟ್‍ಲೀಸ್ಟ್ ಒಂದು ಐಸ್‍ಕ್ರೀಂ ಆದ್ರೂ ಕೊಡ್ಸಿದೀಯಾ ಅವಳಿಗೆ?
ಊಹೂಂ. ಆದ್ರೆ ಅವಳನ್ನ ತುಂಬ ತುಂಬ ಪ್ರೀತಿಸ್ತೀನಿ ಅಂತ ತುಂಬ ಸಾರಿ ಹೇಳಿದೀನಿ.
ಹೋಗ್ಲಿ. ಅದನ್ನಾದ್ರೂ ಅವಳ ಕೈ ಹಿಡಕೊಂಡು ಹೇಳಿದ್ಯಾ? 
ಅದ್ಹೇಗೆ! ತಪ್ಪಲ್ವಾ?
ಮೂರ್ಖ! ನಿನ್ನ ಬಗ್ಗೆ ಕನಿಕರ ಆಗ್ತಾ ಇದೆ.
ದರಿದ್ರ ನಿರ್ಜೀವ ಯಂತ್ರವೇ! ನಿನಗೆ ಭಾವನೆಗಳ ಬಗೆಗೆ ಏನು ಗೊತ್ತು? ಪ್ರೇಮಕ್ಕೆ ಅಂತರಂಗದ ಭಾಷೆ ಇರುತ್ತೆ. ‘ಪ್ರೀತಿ’ ನಿಜವಾಗಿದ್ರೆ ಹೃದಯಗಳ ನಡುವೆ ಸಂವಹನ ನಡೆದೇ ನಡೆಯುತ್ತೆ. ‘ಪ್ಲಟಾನಿಕ್’ ಶಬ್ದದ ಅರ್ಥವಾದ್ರೂ ಗೊತ್ತಾ ನಿನಗೆ? ನನಗೇ ಪಾಠ ಹೇಳಬೇಡ.
ಥಿಯರಿಟಿಕಲೀ ಯು ಆರ್ ಪರ್ಫೆಕ್ಟ್ ಸರ್. ಆದರೆ ಪ್ರಾಕ್ಟಿಕಲೀ ನೋಡಿದಾಗ ಪ್ರೀತಿ ಅನ್ನೋದು ಪ್ರದರ್ಶನದಲ್ಲಿರುತ್ತೆ!
ಮತ್ತು ಸತ್ಯ ಯಾವಾಗಲೂ ಕೋಪ ತರಿಸುತ್ತೆ.
ಅವನಿಗೂ ಹಾಗೇ ಆಯ್ತು. ಒಂದು ಯಃಕಶ್ಚಿತ್ ಯಂತ್ರದಿಂದ ಈ ಮಾತುಗಳನ್ನು ಕೇಳಬೇಕಾಗಿ ಬಂದುದಕ್ಕೆ ರಕ್ತ ಕುದಿಯುತ್ತಿದ್ದರೂ, ಬಿದ್ದು ಹೋದ ದನಿಯಲ್ಲಿ ಕೇಳಿದ.
ಹಾಗಾದ್ರೆ ಪ್ರೀತಿ ಅನ್ನೋದು ಬರೀ ಪ್ರೀತಿ ಮಾತ್ರವೇ ಅಲ್ಲ!
ಹೌದು ಸರ್! ಕೇವಲ ಲಾಜಿಕ್‍ನಿಂದ ಜೀವಿಸೋಕೆ ಸಾಧ್ಯವಿಲ್ಲ. ಜೀವನ ಯಾವತ್ತೂ ತರ್ಕಬದ್ಧವಾಗೇ ನಡೆಯೋದಿಲ್ಲ ಮತ್ತು ಬಯಲಾಜಿಕಲ್ ಫೀಲಿಂಗ್ಸ್ ಇಲ್ಲದೆ...
ಮುಂದೆ ಏನು ಹೇಳುತ್ತಿತ್ತೋ...!
ದಭಾರನೆ ಎತ್ತಿ ಕುಕ್ಕಿದ ಅದನ್ನು!
ಸೃಷ್ಟಿಕರ್ತನನ್ನೇ ಪುಡಿಪುಡಿ ಮಾಡಿಬಿಟ್ಟಂತಹ ವಿಲಕ್ಷಣ ತೃಪ್ತಿಯಿತ್ತು ಅವನ ಮುಖದಲ್ಲಿ!

*****
23-06-2002ರ ಕನ್ನಡಪ್ರಭದಲ್ಲಿ ಪ್ರಕಟಿತ.                      - ಎಸ್ ಎನ್ ಸಿಂಹ, ಮೇಲುಕೋಟೆ.

kannadi sullu heluvudilla


ಕನ್ನಡಿ ಸುಳ್ಳು ಹೇಳುವುದಿಲ್ಲ.
    
ಮೊದಲ ಭೇಟಿಯಲ್ಲೇ ‘ನಾನು ನಿನ್ನನ್ನು ಪ್ರೀತಿಸ್ತೀನಿ’ ಅಂದಿದ್ದ ಆತ.
     ನಕ್ಕುಬಿಟ್ಟಿದ್ದಳವಳು. ನಂಬಿರಲಿಲ್ಲ ಅವನನ್ನು. ಎಷ್ಟು ಜನರೋ ಅಂಥವರು!
     ಅಲ್ಲಿಂದಾಚೆ ಅವನು ಮತ್ತೆಂದೂ ಪ್ರೀತಿಯ ಮಾತೆತ್ತಲಿಲ್ಲ. ಆಡಿದ್ದೆಲ್ಲ ಬೇರೆಯದೇ. ಸಂಗೀತದ ಬಗ್ಗೆ, ಸಾಹಿತ್ಯದ ಬಗ್ಗೆ, ಕಂಪ್ಯೂಟರ್ ಪ್ರೋಗ್ರಾಮಿಂಗ್‍ನ ಸಮಸ್ಯೆಗಳ ಬಗ್ಗೆ, ನೂರೆಂಟು ಬೇಡದ ವಿಷಯಗಳ ಬಗ್ಗೆ! ಆದರೆ ಅವನ ಕಣ್ಣುಗಳು ಮಾತ್ರ ಮೊದಲಿನ ಆರಾಧನೆಯನ್ನೇ ಸೂಸುತ್ತಿದ್ದವು.
     ತಾಳ್ಮೆಗೆ ಮಿತಿಯಿರುತ್ತಲ್ಲವಾ? ಪ್ರೀತಿಯನ್ನು ಪದೇ ಪದೇ ವ್ಯಕ್ತಪಡಿಸದಿದ್ದರೆ ಹ್ಯಾಗೆ? ಹಾಗೆಂದು ಹೆಣ್ಣು ಬಯಸುವುದರಲ್ಲಿ ತಪ್ಪೇನಿದೆ? ತಪ್ಪೆಲ್ಲಾ ಗಂಡಸಿನದೇ. ಹೆಣ್ಣನ್ನು ಅರ್ಥೈಸಿಕೊಳ್ಳಲಾಗದ ಗಂಡಸಿನದು!
     ಅವಳಿಗೆ ಅನುಮಾನ. ಎಷ್ಟು ಅರಸಿಕ ಇವನು. ನನ್ನ ಸೌಂದರ್ಯಾನ ಒಮ್ಮೆಯಾದರೂ ಹೊಗಳಬಾರದಾ? ನನ್ನ ದೇಹದ ಬಗ್ಗೆ ಆಕರ್ಷಣೆ ಇಲ್ಲಾಂದ್ರೆ ಇವನನ್ನ ನಂಬೋದಾದರೂ ಹ್ಯಾಗೆ? ನನ್ನ ಥರಾನೇ ಬೇರೆಯವಳ ಹತ್ತಿರವೂ ವ್ಯವಹರಿಸ್ತಿದ್ರೆ? ಎಂದು ಕೋಪಗೊಂಡ ಅವಳು ಅವನೊಡನೆ ಮಾತೇ ಬಿಟ್ಟಳು. ಆದರೂ ಅವನಿಗೆ ತಿಳಿಯುವಂತೆ ‘ನೋಡೋದೇ ಒಂಥರಾ, ಮಾತಾಡೋದೇ ಒಂಥರಾ ಅಂದ್ರೆ, ಯಾರಿಗೆ ತಾನೇ ಕೋಪ ಬರೋಲ್ಲ?’ ಅಂದಳು.
     ಅವನಿಗೆ ಗೊಂದಲ! ‘ನಾನು ನಿನ್ನ ಪ್ರೀತಿಸ್ತೀನಿ ಅಂದ್ರೆ ನಂಬಲಿಲ್ಲ. ನೀನು ನನ್ನ ಪ್ರೀತಿಸದೆ ಇದ್ರೂ ಚಿಂತೆ ಇಲ್ಲ. ನಾನು ಮಾತ್ರ ಯಾವತ್ತಿಗೂ ನಿನ್ನ ಪ್ರೀತಿಸ್ತಾ ಇರ್ತೀನಿ. ನೀನು ತುಂಬ ಗುಣವಂತೆ’ ಎಂದ. ಆದರೆ ಆಗ ಕೂಡ ಅವಳ ರೂಪದ ಬಗ್ಗೆ ಕಿಂಚಿತ್ತಾದರೂ ಪ್ರಶಂಸಿಸಲಿಲ್ಲ.
     ನಿಜವಾಗಿ ಒಂದು ಹೆಣ್ಣಿನ ಸೋಲು ಅಲ್ಲವಾ ಅದು!
     ಉರಿದು ಬಿದ್ದಳು ಅವಳು. ‘ಎಷ್ಟು ಧೂರ್ತ ನೀನು! ನನಗಿಂತ ಸುಂದರವಾದ ಹೆಣ್ಣು ಕಂಡರೆ ನೀನು ನನ್ನ ಕಡೆಗಣಿಸೋಲ್ಲ ಅಂತ ಏನು ಗ್ಯಾರಂಟಿ? ನಿನ್ನ ನೆರಳು ಕಂಡರೂ ಅಸಹ್ಯವಾಗ್ತಿದೆ. ತೊಲಗು’ ಎಂದಳು.
     ಮೌನವಾಗಿ ಒಳಗೇ ರೋದಿಸುತ್ತಾ ಅಂತರ್ಮುಖಿಯಾಗಿಬಿಟ್ಟ. ಅನಿವಾರ್ಯವಾದ ವಿದಾಯವನ್ನು ನಗುವಿನ ಮುಖವಾಡ ಧರಿಸಿ ಸಲ್ಲಿಸಿದ.
ಅವಳಿಗೆ ಏನೆಲ್ಲ ಕೊಡಬೇಕೆಂದುಕೊಂಡಿದ್ದ!
     ತೋಳುಗಳಿಗೆ ತೋಳಬಂದಿ, ಕೊರಳ ತುಂಬ ಮುತ್ತು!
     ಕೊನೆಯದಾಗಿ ಅವಳಿಗೆ ಒಂದು ಪುಟ್ಟ ಕನ್ನಡಿಯನ್ನು ಕಾಣಿಕೆಯಾಗಿ ಕೊಟ್ಟ.
     ಯಾರು ಎಷ್ಟೇ ಸುಳ್ಳು ಹೇಳಬಹುದು.
     ಕನ್ನಡಿ ಸುಳ್ಳು ಹೇಳುವುದಿಲ್ಲ.
     ಅಂದ ಮಾತ್ರಕ್ಕೆ ಅದು...
     ಅಂತರಂಗದ ನಿಜವನ್ನೇನೂ ಪ್ರತಿಬಿಂಬಿಸುವುದಿಲ್ಲ!

    
*****
13-04-2002ರ ಕನ್ನಡಪ್ರಭದಲ್ಲಿ ಪ್ರಕಟಿತ.                      - ಎಸ್ ಎನ್ ಸಿಂಹ, ಮೇಲುಕೋಟೆ.

kogile kaageyaada kathe


ಕೋಗಿಲೆ ಕಾಗೆಯಾದ ಕಥೆ

     ಒಂದು ಕೋಗಿಲೆ ಇತ್ತು. ಸ್ವಚ್ಛಂದವಾಗಿ ಕುಹೂ ಕುಹೂ ಹಾಡುತ್ತಿತ್ತು.
     ಅದರ ಧ್ವನಿ ಬಹಳ ಚೆನ್ನಾಗಿದೆ ಎಂದು ಒಬ್ಬನಿಗೆ ಅನ್ನಿಸಿತು. ಎಲಾ! ಇದಕ್ಕೆ ಸ ಪ ಸ ಹೇಳಿಕೊಟ್ಟು ಕಛೇರಿ ಇಡಿಸಿದರೆ ಭೇಷಾಗಿರುತ್ತೆ ಎಂದು ಅದನ್ನು ಹಿಡಿದುಕೊಂಡು ಬಂದ.
     ‘ಸ’ ಹೇಳಿಕೊಟ್ಟ. ಭಯವೋ, ಇಷ್ಟವಾಗಲಿಲ್ಲವೋ..,
     ‘ಕಾ’ ಅಂತು.
     ‘ಪ’
     ‘ಕಾ’
     ಸಸ ರಿರಿ ಗಗ ಮಮ
     ಕಾ ಕಾ ಕಾ ಕಾ
     ಅವನಿಗೂ ಬೇಜಾರಾಯ್ತು. ಅಯ್ಯೋ ಮುಂಡೇದೇ. ನಿನಗೆ ಈ ಪಾಠ, ಇಂಥ ಬಂಧನ ಹಿಡಿಸಲಿಲ್ಲವೇನೋ. ಮೊದಲಿನಂತೆಯೇ ಇಷ್ಟ ಬಂದಂತೆ ಹಾಡಿಕೋ ಹೋಗು ಅಂತ ಬಿಟ್ಟುಬಿಟ್ಟ. ಪುರ್ರಂತ ಹಾರಿಹೋಯಿತು ಪರಪುಟ್ಟ. ಕೊಂಬೆಯ ಮೇಲೆ ಕುಳಿತು ಗಂಟಲು ಸರಿಮಾಡಿಕೊಂಡು ಹಾಡತೊಡಗಿತು.
     ಕಾ ಕಾ ಕಾ ಕಾ, ಕಾ ಕಾ ಕಾ....
     ಹೊಸತು ಹತ್ತಲಿಲ್ಲ. ಹಳತು ಮರೆತು ಹೋಗಿತ್ತು!
ಇವತ್ತಿಗೂ ಕೂಗುತ್ತಲೇ ಇದೆ.
ಕಾ ಕಾ ಕಾ ಕಾ, ಕಾ ಕಾ ಕಾ...
    
     *****
03-03-2002ರ ಕನ್ನಡಪ್ರಭದಲ್ಲಿ ಪ್ರಕಟಿತ.                      - ಎಸ್ ಎನ್ ಸಿಂಹ, ಮೇಲುಕೋಟೆ.

sajjanana saavu


ಸಜ್ಜನನ ಸಾವು



ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು. 
ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿಸಿದ ಸೈತಾನ. ಸಜ್ಜನ ಸತ್ತುದಲ್ಲದೆ ತನಗೆ ಉಳಿಗಾಲವಿಲ್ಲ. ಅವನನ್ನು ಕೊಂದರೆ ಸಾಮ್ರಾಜ್ಯವೆಲ್ಲ ತನ್ನದೇ. 
ಅದಕ್ಕಾಗಿ ಏನೆಲ್ಲ ಪ್ರಯತ್ನಿಸಿದ!

ಆಹಾರದಲ್ಲಿ ವಿಷ ಬೆರೆಸಿದ.

ಬೆಂಕಿಯಲ್ಲಿ ನೂಕಲೆತ್ನಿಸಿದ.

ಜಲಪಾತದಲ್ಲಿ ತಳ್ಳಲು ನೋಡಿದ.

ರೈಲು ಕಂಬಿಯ ಮೇಲೆ ಕಟ್ಟಿ ಎಸೆದ.

ಉಹುಂ, ಸಜ್ಜನನಿಗೆ ಸಾವೇ ಇಲ್ಲ.

ಪ್ರತಿ ಬಾರಿ ಪವಾಡ ಸದೃಶ ರೀತಿಯಲ್ಲಿ ಆತ ಪಾರಾಗುತ್ತಿದ್ದ.

ಸೈತಾನನಿಗೆ ತಲೆ ಚಿಟ್ಟು ಹಿಡಿದು ಹೋಯಿತು. 
ಕೊನೆಯ ಯತ್ನವೆಂದು ಒಂದು ಹೆಣ್ಣಿನ ವೇಷ ತಾಳಿ ಬಂದ. ತನಗೆ ವೈರಾಗ್ಯವನ್ನು ಉಪದೇಶಿಸಬೇಕೆಂದು ಕೇಳಿಕೊಂಡಳಾಕೆ. ತನ್ನ ಎಂದಿನ ಹಸನ್ಮುಖದಿಂದ ಒಪ್ಪಿದ ಸಜ್ಜನ. 
ಏಕಾಂತದಲ್ಲಿ ಅವನನ್ನು ತನ್ನ ಸೌಂದರ‍್ಯದಿಂದ ಒಲಿಸಿಕೊಳ್ಳಲು ಯತ್ನಿಸಿದಳವಳು. ಉಹುಂ, ಜಗ್ಗಲಿಲ್ಲ ಸಜ್ಜನ. ಹತ್ತು ನಿಮಿಷದ ನಂತರ ತನ್ನ ಬಟ್ಟೆಗಳನ್ನು ಹರಿದುಕೊಂಡು ಹೊರಬಂದ ಅವಳು, ಸಜ್ಜನ ತನ್ನ ಮೇಲೆ ಅತ್ಯಾಚಾರವೆಸಗಿದನೆಂದು ಗೋಳಿಡತೊಡಗಿದಳು.

ಅವಳ ಆಕ್ರಂದನ ಕೇಳಿ ಜನದ ಗುಂಪು ಸೇರಿತು. ಮೊದಲಿಗೆ ಯಾರೂ ಆ ಆರೋಪವನ್ನು ನಂಬಲಿಲ್ಲ.

ತನ್ನ ಎಂದಿನ ಹಸನ್ಮುಖದಿಂದಲೇ ಹೊರಬಂದ ಸಜ್ಜನ.

ಗುಂಪಿನಲ್ಲಿದ್ದ ಸೈತಾನನ ಸೇವಕನೊಬ್ಬ ಕೂಗಿದ. 

ಎಷ್ಟು ಧೂರ್ತ ಇದ್ದಾನೆ ಈತ. ಕಾಮವನ್ನು ಜಯಿಸಿದವರು ಯಾರೂ ಇಲ್ಲ. ಅಲ್ಲದೆ ಹೆಣ್ಣೊಬ್ಬಳು ತನ್ನ ಶೀಲದ ವಿಷಯದಲ್ಲಿ ಸುಳ್ಳು ಹೇಳುವಳೇನು?


ಗುಂಪಿನಲ್ಲಿ ಗುಜುಗುಜು. ಯಾರೋ ಒಬ್ಬ ನಿಜ! ನಿಜ! ಎಂದ.

ಅಷ್ಟೇ!

ಮರುಕ್ಷಣ ಸಜ್ಜನ ನಿಂತಲ್ಲಿಯೇ ಸತ್ತು ಹೋಗಿದ್ದ!



*****


14-10-2001ರ ಕನ್ನಡಪ್ರಭದಲ್ಲಿ ಪ್ರಕಟಿತ.   - ಎಸ್ ಎನ್ ಸಿಂಹ, ಮೇಲುಕೋಟೆ.


welc0me to the world of my short stories

ಸ್ನೇಹಿತರೆ,
ನನ್ನ  ಸಣ್ಣ ಕಥೆಗಳ ಲೋಕಕ್ಕೆ ಸ್ವಾಗತ...