Friday, April 15, 2016

ಮುಚ್ಚಿಟ್ಟದ್ದು ತನಗೆ !

ಮುಚ್ಚಿಟ್ಟದ್ದು ತನಗೆ !

ಡಾ|| ಅಸದ್ ಗಹಗಹಿಸಿ ನಕ್ಕ. 

ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.

ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ನಗೆಪಾಟಲಾಗಬೇಡ. ನಮ್ಮ ದೃಷ್ಟಿಯಲ್ಲಿ ನಿನ್ನ ಸಮಸ್ಯೆ, ಒಂದು ಸಮಸ್ಯೆಯೇ ಅಲ್ಲ. ಅದನ್ನು ಸರಿಪಡಿಸಿಕೊಳ್ಳೋ ಪರಿಹಾರವೂ ನಿಮ್ಮಲ್ಲೇ ಇದೆ. ನನ್ನ ಬಾಯಿಂದ ಉತ್ತರ ಹೇಳಿಸಬೇಕು ಅಂತ ಯಾಕೆ ಹಟ ಮಾಡ್ತಿದೀಯೆ? ಎನ್ನುತ್ತಿದ್ದವನ ಹಣೆಯ ಮೇಲೆ ಇದ್ದಕ್ಕಿದ್ದಂತೆ ಎರಡು ನೆರಿಗೆಗಳು ಮೂಡಿದವು. 
ನಾನೇನಾದರೂ ನಿನ್ನ ಈ ಪ್ರಶ್ನೆಗೆ ಉತ್ತರಿಸಿದೆ ಅಂತ ಗೊತ್ತಾದ್ರೆ ನಮ್ಮವರೇ ನನ್ನನ್ನು ಕೊಂದುಬಿಡ್ತಾರೆ! ಊಂ, ಆದ್ರೂ ಹೇಳ್ತೀನಿ ಕೇಳಿಸ್ಕೋ ಅಂದ ಡಾ|| ಅಸದ್. ಈಗ ಅವನ ಧ್ವನಿಯಲ್ಲಿ, ಸಾವಿರ ವರ್ಷಗಳಿಂದ ನಿಮ್ಮನ್ನು ಲೂಟಿ ಹೊಡೆದು, ನಮಗೆ ಬೇಕಾದ್ದನ್ನು ಪಡೆದುಕೊಂಡಿದ್ದೇವೆ ಎನ್ನುವ ಗರ್ವ ಹೊರಸೂಸುತ್ತಿತ್ತು.

ಮೊದಲನೆಯದಾಗಿ ನೀವು ನಿಮ್ಮ ಹೆಂಗಸರಿಗೆ ತುಂಬ ಸ್ವಾತಂತ್ರ್ಯ ನೀಡಿದ್ದೀರಿ. ಸಾಲದ್ದಕ್ಕೆ ಅವರನ್ನು ಪೂಜಿಸಿ ಗೌರವಿಸ್ತೀರಿ. ಅದಕ್ಕೇ ಅವರು ನಿಮ್ಮ ತಲೆಯ ಮೇಲೇ ಹತ್ತಿ ಸವಾರಿ ಮಾಡ್ತಾರೆ. ನಮ್ಮನ್ನು ನೋಡಿ ಕಲಿತುಕೊಳ್ಳಿ, ಹೆಂಗಸರನ್ನು ಹೇಗೆ ಹದ್ದುಬಸ್ತಿನಲ್ಲಿ ಇಡಬೇಕು ಅಂತ.

ನೋಡೋ ಪುಳ್‍ಚಾರ್, ಅವರು ಕೇಳಿದ್ದನ್ನೆಲ್ಲಾ ಪೂರೈಸೋಕೆ ಹೋಗಲೇಬಾರದು. ದಿನಕ್ಕೆ ಮೂರುಸಾರಿ ಪ್ರೀತಿಸಿದರೂ ತೃಪ್ತರಾಗೋಲ್ಲ ಅವರು. ಪ್ರೀತಿಸಿ ಪ್ರೀತಿಸಿ ನೀವೇ ಸುಸ್ತಾಗಿಹೋಗ್ತೀರಿ. ಅವಕ್ಕೆ ಹೆಣಚಾಕರಿ ಕೊಟ್ಟು ಏಗಿಸಬೇಕು. ನಮಗೆ ಯಾವಾಗ ಬೇಕೋ ಆಗ ಮಾತ್ರ ಮುಟ್ಟಬೇಕು ಅವುಗಳನ್ನು. ಮರುಭೂಮಿಯ ಸಸ್ಯಗಳ ಬಗ್ಗೆ ಕೇಳಿದೀಯಾ? ಯಾವಾಗ ಮಳೆ ಬರುತ್ತೋ ಅಂತ ಕವ ಕವ ಅಂತ ಕಾಯ್ತಾ ಇರುತ್ವೆ ಬೀಜಗಳು. ಅಪರೂಪಕ್ಕೆ ಮಳೆ ಬಿದ್ದಾಗ, ಸರಭರನೆ ಮೊಳೆತು, ಚಿಗುರಿ, ಅಲ್ಪಾವಧಿಯಲ್ಲೇ ಹೆಚ್ಚು ಬೀಜೋತ್ಪಾದನೆ ಮಾಡಿ ಅಸುನೀಗುತ್ತವೆ. ಹ ಹ್ಹ ಹ್ಹಾ! ನಾವೂ ಕೂಡ ಮರುಭೂಮಿಯಿಂದ ಬಂದವರೇ ಕಣೋ ಅಂದ.

ಅಲ್ವೋ ಪುಳ್‍ಚಾರ್, ದಿನಕ್ಕೆ ಮೂರುಸಾರಿ ಸ್ನಾನ ಬೇರೆ ಮಾಡ್ತೀರಿ ನೀವು. ಪೆದ್ದು ಮುಂಡೇದೇ, ಬೀಜಕ್ಕೆ ಬಿಸಿನೀರು ಬಿದ್ದರೆ ಉತ್ಪಾದನಾ ಶಕ್ತಿ ಕುಂಠಿತವಾಗುತ್ತೆ ಅಂತ ವೈದ್ಯಜಗತ್ತು ಕೂಗಿ ಕೂಗಿ ಹೇಳ್ತಾ ಇದೆ. ನೀವು ಮಾತ್ರ ಬಿಸಿನೀರಿನ ಸುಖವೇ ಬೇಕು ಅಂತೀರಿ. ಅನುಭವಿಸಿ, ನಿಮ್ಮ ಹಣೆಬರಹ! ಇನ್ನೊಂದು ಕುತೂಹಲಕಾರಿ ಸಂಗತಿ ಗೊತ್ತಾ ನಿನಗೆ? ಈ ಹೆಂಗಸರಿಗೆ ಕೊಳಕು ಹಂದಿಗಳು ಅಂದ್ರೆ ತುಂಬ ಇಷ್ಟ! ಗಂಧಕದ ಹೊಗೆ ಸೂಸುವ ಪರ್ವತಗಳ ತಪ್ಪಲಿಗೆ ಸೆಕೆಂಡ್ ಹನಿಮೂನ್‍ಗೆ ಹೋಗುವವರ ಬಗೆಗೆ ಕೇಳಿಲ್ವಾ ನೀನು? ಲಘುವಾದ ಹೈಡ್ರೋಜನ್ ಸಲ್ಫೈಡಿನ ವಾಸನೆ ವಿಷಯೋದ್ರೇಕವನ್ನು ಉಂಟುಮಾಡುತ್ತೆ. ದಿನಗಟ್ಟಲೆ ಸ್ನಾನ ಮಾಡದೇ ಇದ್ದರೆ ನಮ್ಮ ದೇಹವೂ ಅಂಥದೇ ಷಿಂಡುನಾತ ಹೊರಡಿಸುತ್ತೆ. ಅದರ ಮೇಲೆ ಒಂದಿಷ್ಟು ಅತ್ತರು ಸುರಿದುಕೊಂಡು ಬಿಟ್ಟರೆ, ಈ ಹೆಂಗಸರು ಜನ್ಮ ಜನ್ಮಕ್ಕೂ ನಮ್ಮನ್ನೇ ಹುಡುಕಿಕೊಂಡು ಬರುತ್ವೆ.

ಅಲ್ಲಲೇ ಪುಳ್‍ಚಾರ್, ನೀವು ಪರಮ ರಸಿಕರು ಅಂತ ತೋರಿಸಿಕೊಳ್ಳೋಕೆ ದೇವಸ್ಥಾನಗಳಲ್ಲಿ ಕೂಡ ಮಿಥುನ ಶಿಲ್ಪಗಳನ್ನು ಕೆತ್ತಿದೀರಲ್ಲೋ. ಅಲ್ಲದೆ ಆ ನಿಮ್ಮ ಹೆಂಗಸರ ಉಡುಪುಗಳೋ! ಅರೆಬರೆಯಾಗಿ ದೇಹಸಿರಿಯನ್ನು ಎತ್ತಿ ತೋರಿಸುತ್ತಾ ಉದ್ರೇಕಿಸುತ್ತವೆ. ಅವುಗಳನ್ನು ನೋಡಿ ಜೊಲ್ಲು ಸುರಿಸಿಯೇ ನಿಮ್ಮ ಪೌರುಷವೆಲ್ಲ ಉಡುಗಿ ಹೋಗುತ್ತೆ. ಚೆಂದದ ವಸ್ತುಗಳನ್ನು ನಮಗೆ ಬೇಕಾದಾಗ ಮಾತ್ರ ನೋಡಿ ಅನುಭವಿಸಬೇಕಪ್ಪಾ. ಉಳಿದಂತೆ ಅವುಗಳನ್ನು ಭದ್ರವಾಗಿ ಮುಚ್ಚಿಟ್ಟಿರಬೇಕು. ಚೆನ್ನಾಗಿ ಪ್ಯಾಕ್ ಮಾಡಿದ ಉಡುಗೊರೆಗಳನ್ನು ಬಿಚ್ಚಿನೋಡುವಾಗಿನ ಕುತೂಹಲ, ತೆರೆದ ಉಡುಗೊರೆಗಳ ಬಗೆಗೆ ಇರೋಲ್ಲ ಅಲ್ವಾ? ಮುಚ್ಚಿಟ್ಟದ್ದು ತನಗೆ, ಬಿಚ್ಚಿಟ್ಟದ್ದು ಪರರಿಗೆ! ತಿಳ್ಕೋ.

ಲೇ ಪುಳ್‍ಚಾರ್, ಬಹುತೇಕ ಹೆಂಗಸರಿಗೆ ಬೇಕಾದ್ದು ಸ್ವಾತಂತ್ರ್ಯ ಅಲ್ಲಪ್ಪಾ. ಬಲಿಷ್ಠವಾದ ಗಂಡಸಿನಿಂದ ಆಳಿಸಿಕೊಳ್ಳೋಕೆ ಬಯಸುತ್ವೆ ಅವು. ಸರಿಯಾಗಿ ಬೇಲಿಹಾಕಿ ಕಾಯ್ದುಕೊಂಡರೆ ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ವೆ. ಬೇಲಿ ಇಲ್ಲದೆಯೂ ಬದುಕಬಹುದು ಅಂತ ಅವುಗಳಿಗೆ ತಿಳಿದುಬಿಟ್ಟರೆ, ನಿಮ್ಮ ಗತಿಯೇ ನಮಗೂ ಆಗಿಬಿಡುತ್ತೆ.

ಕೊನೇದಾಗಿ ಹೇಳ್ತೀನಿ, ಸರಿಯಾಗಿ ಕೇಳಿಸ್ಕೋ ಪುಳ್‍ಚಾರ್, ನಿಮ್ಮ ಧರ್ಮಶಾಸ್ತ್ರ, ಸಮಾನತೆಯ ಕಾನೂನು ಇವುಗಳನ್ನೆಲ್ಲಾ ತಗೊಂಡೋಗಿ ಮೊದಲು ತಿಪ್ಪೆಗೆ ಬಿಸಾಕು. ನಮ್ಮ ಹಾಗೆ ಮೂರು ಮಾತಿನ ವಿಚ್ಛೇದನದ ಒಂದು, ಒಂದೇಒಂದು ಸೌಲಭ್ಯ ಅಳವಡಿಸಿಕೊಳ್ಳಿ ಸಾಕು! ಇಪ್ಪತ್ತೇ ವರ್ಷಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳೂ ಬಗೆಹರಿದು ಹೋಗುತ್ತವೆ ಅಂದ ಡಾ|| ಅಸದ್.

ಅಸದ್ ಸಿದ್ಧಾಂತಗಳನ್ನು ಸುಳ್ಳು ಎಂದು ಸಾಬೀತುಪಡಿಸುವ ನೂರಾರು ಥಿಯರಿಗಳು ಇದ್ದರೂ ಅವುಗಳಿಂದೇನೂ ಪ್ರಯೋಜನವಿಲ್ಲ; ಪ್ರಾಕ್ಟಿಕಲ್ ತರಗತಿಗಳನ್ನು ಶುರುಮಾಡದ ಹೊರತು! ಅಂದುಕೊಳ್ಳುತ್ತಾ ಕ್ಲಿನಿಕ್ಕಿನಿಂದ ಹೊರಬಿದ್ದೆ.
*****
14-04-2016 - ಎಸ್ ಎನ್ ಸಿಂಹ, ಮೇಲುಕೋಟೆ

Friday, March 4, 2016

ಸೋಸುಕ (ಫಿಲ್ಟರ್)

ಸೋಸುಕ (ಫಿಲ್ಟರ್)

ಕೋಪದ ಭರದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿರುತ್ತವೆ ಎಂದು ನೀವು ಈಗಲೂ ಭಾವಿಸುತ್ತೀರಾ? ಎಂದ.
ದೂರಾನ್ವಯದೋಷದಿಂದ ಕೂಡಿದೆಯೆಂಬಂತೆ ಭಾಸವಾಗುವ ಇಂತಹ ವಾಕ್ಯಗಳು ಸಾಮಾನ್ಯ ಜನರಿಗೆ ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ.
ಅವಳಿಗೂ ಹಾಗೇ ಆಯಿತು. ರೈಲು ನಿಲ್ದಾಣದ ಸಿಮೆಂಟು ಬೆಂಚಿನ ಮೇಲೆ ಮಗುವಿನೊಂದಿಗೆ ಕುಳಿತಿದ್ದ ಅವಳು ಗಲಿಬಿಲಿಗೊಂಡು, ಏನು? ಎಂದಳು.
ಸಿಟ್ಟಿನಲ್ಲಿ ತಗೋಳೋ ತೀರ್ಮಾನಗಳು ಸರಿಯಾಗಿರುತ್ವೆ ಅಂತೀರಾ? ಅಂದ.
ಅದಕ್ಕೇನೂ ಉತ್ತರಿಸದೆ, ‘ಊಟದ ಪಾರ್ಸೆಲ್ ಜೊತೆ ಚಾಕಲೇಟೂ ಬೇಕಂತೆ ಅಂತ ಡ್ಯಾಡಿಗೆ ಹೇಳಿ ತೆಗೆಸ್ಕೊಂ ಬಾ’ ಎಂದು ತನ್ನ ಮಗುವಿಗೆ ಹೇಳಿ ಕಳಿಸಿದಳು. ಖುಷಿಯಿಂದ ಓಡಿತು ಮಗು.
ಇವನ ಕಣ್ಣುಗಳಲ್ಲಿ ಮಾತ್ರ ಅದೇ ಪ್ರಶ್ನೆ ಸ್ಥಾಯಿಯಾಗಿ ನಿಂತಿದೆ.
ಬಲವಂತವಾಗಿ ನಗುತ್ತಾ, ನೀವು ಈಗಲೂ ಹಾಗೇ ಒಗಟಾಗಿಯೇ ಮಾತಾಡುತ್ತೀರಿ ಅಂದಳು.
ಅವನ ಕಣ್ಣುಗಳಲ್ಲಿದ್ದ ಪ್ರಶ್ನೆ ಸತ್ತುಹೋಗಿ, ತರ್ಪಣ ಜಲ ಕವರಿಕೊಂಡಿತು!
‘ಅತಿಭಾವುಕತೆಯು ಒಳ್ಳೆಯದಲ್ಲ’ ಎಂದು ಅವನ ಗೆಳತಿಯೊಬ್ಬಳು ತುಂಬ ಸಾರಿ ಎಚ್ಚರಿಸುತ್ತಿದ್ದಳು.
ಎಷ್ಟೇ ಪ್ರಶಸ್ತವಾದ ಪಾಠಗಳಾದರೂ, ಎಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂಬ ನಿಯಮವೇನೂ ಲೋಕದಲ್ಲಿಲ್ಲವಲ್ಲ!
ಕಂಪಿಸುವ ದನಿಯಲ್ಲಿ, ‘ನೀವು ನನ್ನನ್ನು ಇಷ್ಟಪಡಲಿಲ್ಲ ಅನ್ನೋದಕ್ಕಿಂತ ನನ್ನನ್ನು ನಂಬಲಿಲ್ಲ ಅನ್ನೋದೇ ನನ್ನನ್ನು ತುಂಬಾ ಬಾಧಿಸ್ತಿದೆ’ ಅಂದ.
ಕಂಪನದ ಪರಿಣಾಮವೋ ಏನೋ, ತರ್ಪಣದ ಹನಿಗಳು ಕೆಳಗೆ ಉದುರಿಯೇ ಬಿಟ್ಟವು!
‘ಅಳುವ ಗಂಡಸನ್ನು ನಂಬಬಾರದು’ ಎನ್ನುವುದು ಕೂಡ ಒಂದು ಪ್ರಶಸ್ತವಾದ ಪಾಠವೇ!
ಆದರೆ ಹೆಂಗಸರಿಗೆ, ಅದರಲ್ಲೂ ಮದುವೆಯಾದ ಹೆಂಗಸರಿಗೆ ಈ ಪಾಠ ರುಚಿಸುವುದಿಲ್ಲ.
ಸಾಧಾರಣವಾಗಿ ಹೆಂಗಸರು ಇಂತಹ ಮಾತುಗಳಿಗೆ ಬಹಿರಂಗವಾಗಿ ಪ್ರತಿಕ್ರಿಯಿಸುವುದಿಲ್ಲ.
ಆದರೆ, ಅಷ್ಟು ಚೆಂದದ ಗಂಡಸು ತನ್ನನ್ನು ಇನ್ನೂ ಆರಾಧಿಸುತ್ತಿದ್ದಾನೆ ಎಂಬ ಅಂಶ ಅವಳಂಥವಳ ಅಹಂ ಅನ್ನು ಕೂಡ ಸಾವಿರಾರು ಪಟ್ಟು ಹೆಚ್ಚಿಸಿಬಿಟ್ಟಿತು!
‘ನೋಡು, ಇವಳೇ ನಾನು ಮೊಟ್ಟಮೊದಲು ಪ್ರೀತಿಸಿದ ಹುಡುಗಿ’ ಎಂದು ಪಕ್ಕದಲ್ಲಿದ್ದ ಹೆಂಡತಿಗೆ ಅವಳನ್ನು ಪರಿಚಯಿಸಿದ! ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುವುದು ಎಂಬ ನುಡಿಗಟ್ಟಿಗೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇನ್ನಾವುದೂ ಸಿಗಲಿಕ್ಕಿಲ್ಲ!
ಅವನ ಹಳವಂಡಗಳನ್ನು ತನ್ನ ಚೂಪು ಕಣ್ಣುಗಳಿಂದ ನೋಡಿಯೂ ನೋಡದಂತೆ ಕುಳಿತಿದ್ದ ಅವನ ಧರ್ಮಪತ್ನಿ, ಆ ಹೆಂಗಸಿನ ಮುಖವನ್ನು ನೋಡುತ್ತಿದ್ದಂತೆ ಇನ್ನಷ್ಟು ಚಕಿತಳಾದಳು. ತನ್ನ ಕಾಲುಪಾಲೂ ಸುಂದರಿಯಲ್ಲದ, ಅಂತಹ ಹೆಂಗಸನ್ನು ಪ್ರೀತಿಸಿದ ತನ್ನ ಗಂಡನ ಅಭಿರುಚಿಯ  ಬಗ್ಗೆ ಅವಳಿಗೆ ಮೊದಲಬಾರಿಗೆ ತೀರ ನಿಕೃಷ್ಟ ಭಾವನೆ ಉಂಟಾಯಿತು. 
ನಿದ್ದೆಯಲ್ಲಿ ನಾನು ನಿಮ್ಮ ಹೆಸರನ್ನು ತುಂಬಸಾರಿ ಕನವರಿಸುತ್ತಿರುತ್ತೇನೆ ಎಂದು ಇವಳು ಆಗಾಗ ಹೇಳುತ್ತಿರುತ್ತಾಳೆ ಎಂದ.
ಈ ಮಾತಿನಿಂದ ಅವಳ ಹೃದಯದಲ್ಲಿ ಉಂಟಾದ ಕಲ್ಲೋಲವನ್ನು ವ್ಯಕ್ತಪಡಿಸುವ ಶಕ್ತಿ, ಶಬ್ದಗಳಿಗೆ ಖಂಡಿತವಾಗಿಯೂ ಇಲ್ಲ.
ರೈಲು ಕೂಗಿತು. ನಿಂತ ನಿಲ್ದಾಣ, ಏರಿದ ಬಂಡಿ ಒಂದೇ ಆದರೂ, ಎಲ್ಲರ ಗಮ್ಯವೂ ಒಂದೇ ಆಗಿರಬೇಕಿಲ್ಲ!
ಆ ರಾತ್ರಿ ಅವನು, ತುಂಬ ವರ್ಷಗಳಿಂದ ಕಳೆದುಕೊಂಡಿದ್ದ, ಒಂದು ನೆಮ್ಮದಿಯ ನಿದ್ದೆಯನ್ನು ಮತ್ತೆ ಪಡೆದ. ಅಂದು ನಿದ್ದೆಯಲ್ಲಿ ಅವನೇನಾದರೂ ಕನವರಿಸಿಕೊಂಡನೋ ಇಲ್ಲವೋ ಎಂದು ಗಮನಿಸಲು ಇವಳೂ ಇಲ್ಲ ಎಂಬುದು ಅವನಿಗಿನ್ನೂ ಗೊತ್ತಾಗಿಲ್ಲ.
ನೀತಿ: ಹೃದಯ ಮತ್ತು ಬುದ್ಧಿಗಳ ನಡುವೆ ಫಿಲ್ಟರ್ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಹೃದಯ ಮತ್ತು ಬಾಯಿಗಳ ನಡುವೆ ಒಂದು ಸೋಸುಕ ಇರಲೇಬೇಕು!
*****
22-02-2016 - ಎಸ್ ಎನ್ ಸಿಂಹ, ಮೇಲುಕೋಟೆ

Tuesday, February 24, 2015

ಚಂಚರೀಕ

ಚಂಚರೀಕ

ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ.
ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !

ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್ಕೊಳಗಾಗಿದ್ದ.

ತನಗಿಂತ ಅವನಲ್ಲಿ ಹೆಚ್ಚಿನದೇನಿದೆ ಎಂಬ ಅನ್ವೇಷಣೆ,
ಅವನಿಗಿಂತ ತನ್ನಲ್ಲೇನು ಕೊರತೆಯಿದೆ ಎಂಬ ಅವಲೋಕನೆ,
ತನ್ನಿಂದೇನಾದರೂ ತಪ್ಪಾಯಿತೋ ಎಂಬ ಆತ್ಮಶೋಧನೆ,
ಹೆಂಗಸಿಗೆ ಬೇಕಾದುದೇನು ಎಂಬ ಸಂಶೋಧನೆ,

ಒಂದೊಂದೂ ಎಷ್ಟು ಟನ್ನುಗಳ ತೂಕದ್ದೆಂದು ಅವನಿಗೇ ಗೊತ್ತಿರಲಿಲ್ಲ !
ಆಫ್‍ಕೋರ್ಸ್, ಆ ಭಾರ ಹೊರಗಿನವರಾರಿಗೂ ತಿಳಿಯುತ್ತಿರಲೂ ಇಲ್ಲ !

ಅವನ ಭಾವನಾಲೋಕದಲ್ಲಿ ಅಂತರ್ಯುದ್ಧವೊಂದು ನಿರಂತರವಾಗಿ ನಡೆಯುತ್ತಲೇ ಇತ್ತು.
ಹೋಲಿಕೆಗಳ ವಿಶ್ಲೇಷಣೆಯಿಂದ, ಚರ್ಯೆಗಳ ಪುನರ್ವಿಮರ್ಶೆಗಳಿಂದ ಅವನು ಹೈರಾಣಾಗಿಹೋಗಿದ್ದ.
ತುಮುಲಗಳ ಸಂಘರ್ಷದಿಂದ ಅವನ ಹೃದಯ ಛಿದ್ರವಾಗಿಬಿಟ್ಟಿತ್ತು.
ಇಷ್ಟೆಲ್ಲ ಭಾರಗಳ ಅಡಿಯಲ್ಲಿ ಅವನ ಆತ್ಮವಿಶ್ವಾಸ ನಲುಗಿಹೋಗಿತ್ತು !

ಆದರೀಗ ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ !
ಅವಳು ಆ ಬೇರೊಬ್ಬನನ್ನೂ ಬಿಟ್ಟುಹೋದಳು ಎಂಬ ಸಂಗತಿ ಇಷ್ಟೊಂದು ರಿಲೀ(ಲೈ)ಫ್ ಕೊಡಬಹುದೆಂದು ಅವನು ಕನಸಿನಲ್ಲಿಯೂ ಊಹಿಸಿರಲಿಲ್ಲ !

ಅವನಿಗೆ ಪಂಚತಂತ್ರದ ಕಥೆಯೊಂದು ನೆನಪಾಯಿತು.
ಅದರ ಹೆಸರು ಲಬ್ಧಪ್ರಣಾಶ !
ಒಂದಕ್ಕಿಂತ ಒಂದು ಹೆಚ್ಚಿನ ಲಾಭದಾಯಕವಾದುದನ್ನು ಹುಡುಕಿಕೊಂಡು ಹೋಗುವ ಅತ್ಯಾಶಿಗಳಿಗೆ ಕೊನೆಗೆ ಲಭಿಸುವುದು ತಲೆಯಮೇಲೆ ಕೊರೆಯುತ್ತ ತಿರುಗುವ ಕ್ರೂರ ಚಕ್ರ. ಅಷ್ಟೇ !

ಅಲ್ಲದೆ, ಹೂವಿಂದ ಹೂವಿಗೆ ಬಂಡುಂಡು ಹಾರುವ ಚಂಚರೀಕದ ಬಗ್ಗೆ ಯಾವ ಹೂವೂ ಕೊರಗುತ್ತ ಕೂರುವುದಿಲ್ಲ.
ಜತನದಿಂದ ಮುಡಿಗೇರಿಸಿಕೊಂಡ ಕೈಗಳೇ ತನ್ನನ್ನು ಕಿತ್ತು ಬಿಸುಟಾಗಲಷ್ಟೇ ಅದರ ನಿಟ್ಟುಸಿರು !

ಸೋಜಿಗದ ಪ್ರಶ್ನೆಯೆಂದರೆ, 
ಕಾಲಚಕ್ರದ ತಿರುಗಣೆಯಲ್ಲಿ, ಪರಂಪರಾಗತ ಹೂವು-ದುಂಬಿಗಳ ಪಾತ್ರ ಅದಲು-ಬದಲಾಗಿಬಿಟ್ಟಿದೆಯೋ ?!

ಈ ಪ್ರಶ್ನೆ ಅಷ್ಟೇನೂ ತೂಕದ್ದಲ್ಲ !

24-02-2015 - ಎಸ್ ಎನ್ ಸಿಂಹ, ಮೇಲುಕೋಟೆ

Monday, September 1, 2014

ಸ್ನೇಹಿತರೇ ,

ನನ್ನ 'ಬುದ್ಧನ ನಗು' ಕವನ ಸಂಕಲನ ಕೆಳಗಿನ ಲಿಂಕಿನಲ್ಲಿ ಲಭ್ಯ.

https://drive.google.com/file/d/0B1Xc7qkYX-4dakZHOTR1NXhtWWs/edit?usp=sharing

Monday, August 4, 2014

ಸೂಕರ ಸಂತತಿ

                         ಸೂಕರ ಸಂತತಿ

ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಅಲ್ಲಾಹುವಿನ ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು. 

ಸೂತೇ ಸೂಕರಯುವತಿಃ ಸುತಶತಂ ದುರ್ಭಗಂ ಝಟಿತಿ |
ಕರಿಣೀ ಚಿರಾಯ ಸೂತೇ ಶೂರಮಹೀಪಾಲಲಾಲಿತಂ ಕಲಭಮ್ ||
(ಕೊಳಕು ಹಂದಿಯು ಅನತಿಕಾಲದಲ್ಲಿ ನೂರಾರು ಮರಿಗಳನ್ನು ಹೆರುತ್ತದೆ. ಆದರೆ ಆನೆಯು ರಾಜರಿಂದ ಆದರಿಸಲ್ಪಡುವ ಒಂದೇ ಒಂದು ಮರಿಯನ್ನು ದೀರ್ಘಾವಧಿಯಲ್ಲಿ ಹೆರುತ್ತದೆ. ಇದು ವೇದಾಂತ ದೇಶಿಕರು ಶತಮಾನಗಳ ಹಿಂದೆಯೇ ಹೇಳಿದ ಮಾತು!)

ಹೀಗೆ 49 ಹಂದಿ ಮರಿಗಳ ಹಿಂಡಿನಿಂದ ಸಾಧುಹಸುವಿನ ಕೊಟ್ಟಿಗೆ ತುಂಬಿಹೋಯಿತು ಮಾತ್ರವಲ್ಲ, ಹಂದಿಗಳ ಹೊಲಸನ್ನು ಸಹಿಸುವುದು ಸಾಧುಹಸುವಿಗೆ ಅಸಾಧ್ಯವಾಯಿತು. ದಯವಿಟ್ಟು ನಿನ್ನ ಮರಿಗಳನ್ನು ಕರೆದುಕೊಂಡು ನಿನ್ನ ರೊಪ್ಪಕ್ಕೆ ಹೊರಡು ಎಂದು ಆ ಹೊಲಸು ಹಂದಿಯನ್ನು ಬೇಡಿಕೊಂಡಿತು ನಮ್ಮ ಸಾಧುಹಸು. 

ಕಣ್ಣು ಕೆಕ್ಕರಿಸಿಕೊಂಡು ಆ ಪುಣ್ಯಕೋಟಿಯನ್ನು ಬೆದರಿಸುತ್ತಾ, "ನಾವು ಇಲ್ಲಿ ಹುಟ್ಟಿದ್ದೇವೆ ಎಂದ ಮೇಲೆ ಇದು ನಮ್ಮದೇ ಜಾಗ. ನಾವಿಲ್ಲಿ ಯುದ್ಧವಿದ್ಯಾಲಯವೊಂದನ್ನು ಕಟ್ಟಲಿದ್ದೇವೆ. ನೀನು ಬೇಕಾದರೆ ನಿನ್ನ ಕರುವಿನೊಂದಿಗೆ ಇಲ್ಲೇ ಮೂಲೆಯಲ್ಲಿರು. ನಮ್ಮ ತಂಟೆಗೇನಾದರೂ ಬಂದರೆ, ಅಬ್ಬೇಪಾರಿಗಳಿಗೆ ಕಿರುಕುಳ ಕೊಡುತ್ತಿದ್ದೀಯೆ ಎಂದು ನಿನ್ನ ಮೇಲೇ ಮೃಗೀಯಸರ್ಕಾರಕ್ಕೆ ದೂರು ಕೊಡುತ್ತೇನೆ" ಎಂದಿತು ಆ ಹೊಲಸು ಹಂದಿ. 

ಕರುಣೆತೋರಿ ಆಶ್ರಯ ನೀಡಿದ ಸಾಧುಹಸು ದಿಗ್‍ಭ್ರಾಂತವಾಯಿತು! ಅದರ ಮುಂದೆ ಉಳಿದದ್ದು ಎರಡೇ ಆಯ್ಕೆಗಳು. ಒಂದೋ, ಆ ಹಂದಿಗಳ ಹೊಲಸನ್ನು ಸಹಿಸಿಕೊಂಡು ನರಳುತ್ತಾ ಅಲ್ಲೇ ಸಾಯುವುದು ಅಥವಾ ಈ 49 ಹೊಲಸು ಹಂದಿಗಳು ಹಾಗೂ ಅವುಗಳ ಭವಿಷ್ಯತ್ ಸಂತತಿಗಳು ಆಕ್ರಮಿಸದಿರುವಷ್ಟು ದೂರದ ಇನ್ನಾವುದಾದರೂ ಶಾಂತ ನೆಲೆಯನ್ನು ಹುಡುಕಿಕೊಳ್ಳುವುದು !

ನಿರ್ಧರಿಸಲಾಗದೆ ತೊಳಲುತ್ತಾ, ಹೊರಗೆ ಮಳೆಯಲ್ಲಿ ನೆನೆಯುತ್ತಾ ಕರುವಿನೊಂದಿಗೆ ನಿಂತಿತು ಸಾಧುಹಸು !

ನೀತಿ: ಓದುಗರ ವಿವೇಚನೆಗೇ ಬಿಟ್ಟಿದೆ.


                                          *****

03-08-2014     - ಎಸ್ ಎನ್ ಸಿಂಹ, ಮೇಲುಕೋಟೆ

Monday, June 23, 2014

22-06-2014 ರಂದು ಮಂಡ್ಯದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಆಧುನಿಕ ವಚನಗಳು

             ಸತ್ಕøತಿ
ಕೋಟಿ ಭಾಷಣಕಿಂತ ಒಂದು ಕಿಂಕೃತಿ ಲೇಸು
ಕೋಟಿ ಬೋಧನೆಗಿಂತ ಒಂದು ಸನ್ನಡತೆ ಲೇಸು !
ಕೋಟಿ ಹುಸಿಮಿತ್ರರಿಗಿಂತ ಒಬ್ಬ ಸನ್ಮಿತ್ರನು ಲೇಸು
ಕೋಟಿ ಮಿಥ್ಯಾಗುರುಗಳಿಗಿಂತ ಒಬ್ಬ ಸದ್ಗುರು ಲೇಸು ರಾಮಾನುಜ !

         ಚಾರ್ವಾಕ ಮತ
ಜಡಮತಿಯ ದೃಷ್ಟಿಯಲಿ ಸುಖದುಃಖ ನಿರಪೇಕ್ಷ
ನಿರ್ಗುಣದ ವಸ್ತುವಿದೆ, ಸಾಧಿಪುದೆ ಮೋಕ್ಷ !
ನನ್ನ ಕೇಳ್ ಚೆಲುವಾದ ನಶೆಗಣ್ಣ ಸೊಕ್ಕಿರುವ
ನವಯುವತಿ ನೀವಿಯನು ಸೆಳೆಯುವುದೆ ಮೋಕ್ಷ !

           ಜಡಮತಿ
ಮೇಲುಕೀಳುಗಳೆಲ್ಲ ಅರೆಮತಿಯ ಸೃಷ್ಟಿಯದು
ಜಡಮತಿಗೆ ತಿಳಿಯುವುದೆ ನಿಮ್ನ ಪೀನತೆಗಳ್?
ನೆಮ್ಮದಿಯ ಬಾಳುವೆಗೆ ಅರಿವೆ ಅರಿಯಹುದಂತೆ
ಸ್ಥಿರಮತಿಯ ಮಾಡೆನ್ನ ರಾಮಾನುಜ !

        ಮುಕ್ತಿಮಾರ್ಗ
ಭಾವಶುದ್ಧಿಯ ಬಕುತಿ ಬೇಹುದು
ಅದಾವ ಜಾತಿಯೊಳಿದ್ದರೂ ಸರಿ
ಜಾವಜಾವದಲೊಮ್ಮೆ ಪೂಜೆಯ ಮಾಡಬೇಕಿಲ್ಲ.
ಕಾವನನು ಜಯಿಸಿದ್ದು ಯಾರಿಗು
ನೋವ ಗೈಯದ ಭಕ್ತರನು ಹರಿ
ಕಾವನೆಂಬಾ ಮಾತೆ ಸತ್ಯವು ಕೇಳು ರಾಮಾನುಜ !


22-06-2014 - ಎಸ್ ಎನ್ ಸಿಂಹ, ಮೇಲುಕೋಟೆ

ಶರಣ ಸಾಹಿತ್ಯ ಸಮ್ಮೇಳನ, ಮಂಡ್ಯ
ಮೆಕ್ಕಾದಲ್ಲಿರುವ ವಿಷ್ಣುಪಾದ !Friday, May 30, 2014

ಆರಿದ ಅಗ್ನಿ = ಇದ್ದಿಲು !


ಮಿತ್ರ ಉಲ್ಲೇಖಿಸಿರುವ ನನ್ನ ಪದ್ಯದ ಪೂರ್ಣ ರೂಪ ಹೀಗಿದೆ,

ದುರ್ಜನರೊಂದಿಗೆ ಸ್ನೇಹವು ಎಂತೋ 
ದ್ವೇಷವು ಕೂಡಾ ಕೂಡದದು !
ಕೆಂಡವ ಹಿಡಿದರೆ ಸುಡುವುದು ಅಂಗೈ 
ಇದ್ದಿಲದೋ ಮಸಿ ಬಳಿಯುವುದು !!

- ಎಸ್ ಎನ್ ಸಿಂಹ , ೧೯೯೪ರಲ್ಲಿ