ಕವಲಿನ ಬಗ್ಗೆ ಮಾನ್ಯ ವಿಮರ್ಶಕ ಆಮೂರರು ಬಹಳ ಸೊಗಸಾದ ಅಭಿಪ್ರಾಯಗಳನ್ನು ನೀಡಿದ್ದಾರೆ. ‘ಭೈರಪ್ಪನವರ ಭಾಷೆಯು ಸಾಮಾನ್ಯವಾಗಿ ವರದಿಯ ಭಾಷೆಗಿಂತ ಮೇಲೇರುವುದಿಲ್ಲ’ ಎಂಬುದು ಅವರ ಭರತವಾಕ್ಯ! (see Vijaynext july 16)
ನಮ್ಮಂತಹ ಪಾಮರರಿಗೆ ಇಂಥ ದೋಷಗಳು ಗೊತ್ತೇ ಆಗುವುದಿಲ್ಲ ನೋಡಿ! ಎಂತಹ ದಡ್ಡ ಜನ ನಾವು! ಭಾಷೆಯ ಮೂಲ ಉದ್ದೇಶವು ಸಂವಹನ ಎಂಬ ತಪ್ಪು ತಿಳುವಳಿಕೆಯಲ್ಲೇ ಇದ್ದೇವೆ! ಮಾನವನ ಮಾನಸಿಕ ತುಮುಲಗಳನ್ನು ಭೈರಪ್ಪನವರಷ್ಟು ಸಮರ್ಥವಾಗಿ ಬರಹ ರೂಪಕ್ಕೆ ಇಳಿಸುವ ಮತ್ತೊಬ್ಬ ಲೇಖಕ ಇಲ್ಲವೇ ಇಲ್ಲ ಎಂಬ ಭ್ರಮೆಯಲ್ಲೇ ಇದ್ದೇವೆ. ಆಮೂರರು ಹೇಳಿದ ಮೇಲಷ್ಟೇ ನನಗೆ ಗೊತ್ತಾದ್ದು! ಅನನ್ಯವಾದ ಮನೋವ್ಯಾಪಾರವನ್ನು ಯಃಕಶ್ಚಿತ್ ವರದಿಯ ಭಾಷೆಯಲ್ಲಿ ಒದರುವುದೇ! ಎಂಥಹ ಹೇಯ ಕೃತ್ಯ!
ಪ್ರಿಯ ಓದುಗರೇ! ನಿರಾಶರಾಗದಿರಿ. ಕಾದಂಬರಿಯ ಭಾಷೆಯು ಎಂಥದಿರಬೇಕೆಂದು ಶೀಘ್ರದಲ್ಲೇ ಆಮೂರರು ತೋರಿಸಿಕೊಡಲಿದ್ದಾರೆ. ಅಂತಹ ಶ್ರೇಷ್ಠ ಮಾದರಿಯ ಒಂದು, ಕನಿಷ್ಠ ಒಂದೇ ಒಂದು ಪ್ಯಾರಾ ಬರೆಯುವ ಮೂಲಕ!
ತಾಳ್ಮೆಯಿಂದ ಕಾಯುವಿರಲ್ಲ?
No comments:
Post a Comment