30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ
ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು
ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ.
ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್)
ಕ್ರೂರಂ ಮನೋಭವನದೆಂಬುದು ಚಿತ್ತವೇದ್ಯಂ
ವೈರಕ್ಕಸಾಧ್ಯನಿದೊ ಸಾಕ್ಷಿ ಗಡಾರ್ಧಕಾಂತಮ್ |
ನೀರಂ ರತೀಶ್ವರಿಯೆನಲ್ ಮಿಗೆ ತೃಪ್ತಿತೋಷರ್
ಶೂರಾರ್ಧರಪ್ಪ ಸುತೆಸೂನುಗಳಲ್ತೆ ನೋಡಲ್ ||
ಪೃಚ್ಛಕ ಪೂರಣ : (ವಿ|| ಎಸ್ ಎನ್ ಸಿಂಹ, ಮೇಲುಕೊಟೆ)
ಕ್ರೂರಂ ಮತ್ತನಿವಾರ್ಯನೇ ಬಿಸುಡೆಲೋ ಫುಲ್ಲೋತ್ಪಲಂ ಮಾರನೇ
ವೈರಂ ನನ್ನೊಡನೇಕೆ ಬಾಣ ತೊರೆ ನೀನ್ ಆ ಬಿಲ್ಲು ಮತ್ತೇತಕೆ |
ನೀರಾಸಂಗವಿಯೋಗ ದುಃಖಝಳದಿಂದೀದೇಹ ಬೇಯುತ್ತಿರಲ್
ಶೂರರ್ಗೀಪರಿ ಧರ್ಮವೇ ಮೃತನನುಂ ಮತ್ತೊಮ್ಮೆ ನೀ ಕೊಲ್ವುದೇ ||
ಸಮಸ್ಯಾ ಪೂರಣ : ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್
ಗಡಿಯಂ ಕಾಯುತಲಿದ್ದರು
ನಾಡಾಳ್ವರ ಕೃಪೆಯಿಂ ಗೌಡೀತುರುಕರು ಬೆಂ-
ಗಡೆಯಿಂ ನುಸುಳುತೆ ಕಾವಲ್
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್ !
(ಗೌಡೀ = ಬಂಗಾಳ = ಬಾಂಗ್ಲಾಮುಸ್ಲಿಮರು)
01-12-2012 - ಎಸ್ ಎನ್ ಸಿಂಹ, ಮೇಲುಕೊಟೆ
No comments:
Post a Comment